ETV Bharat / bharat

ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್​ಗಳನ್ನು ನೀಡುವ 'ಪ್ಯಾಡ್ ದಾದಿ'ಗೊಂದು ಸಲಾಂ

ಗುಜರಾತ್​ನ ಸಾಮಾಜಿಕ ಕಾರ್ಯಕರ್ತೆ 'ಪ್ಯಾಡ್ ದಾದಿ' ಎಂದೇ ಹೆಸರಾದ ಮೀನಾ ಮೆಹ್ತಾ ಜೊತೆ ಈಟಿವಿ ಭಾರತ ನಡೆಸಿದ​ ಸಂದರ್ಶನ ಇಲ್ಲಿದೆ.

WOMEN'S DAY
ಮೀನಾ ಮೆಹ್ತಾ
author img

By

Published : Mar 8, 2020, 1:49 AM IST

ಸೂರತ್​ (ಗುಜರಾತ್​): ಬಾಲಿವುಡ್ ಸಿನಿಮಾ 'ಪ್ಯಾಡ್ ಮ್ಯಾನ್' ಬಿಡುಗಡೆಯಾಗುವ ಐದು ವರ್ಷಗಳ ಮೊದಲೇ 'ಪ್ಯಾಡ್ ದಾದಿ' ಎಂದೇ ಹೆಸರಾದ ಮೀನಾ ಮೆಹ್ತಾ ಎಂಬುವರು ಸೂರತ್‌ನ ಹಿಂದುಳಿದ ವರ್ಗದ ಹುಡುಗಿಯರಿಗೆ, ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್​ಗಳನ್ನ ವಿತರಿಸುತ್ತಾ ಬಂದಿದ್ದಾರೆ.

ಪ್ರತಿ ತಿಂಗಳು ಅವರು ವಿವಿಧ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರಿಗೆ 5,000 ಸ್ಯಾನಿಟರಿ ಪ್ಯಾಡ್​ಗಳನ್ನ ವಿತರಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಿಎಂ ಮೋದಿ ನಡೆಸುತ್ತಿರುವ #SheInspiresUs ಎಂಬ ಅಭಿಯಾನದ ಮೂಲಕ ಮೀನಾ ಮೆಹ್ತಾ ಅವರ ಸಾಮಾಜಿಕ ಸೇವೆಯನ್ನ ಬೆಳಕಿಗೆ ತಂದಿದ್ದಾರೆ.

ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್​ಗಳನ್ನು ನೀಡುವ 'ಪ್ಯಾಡ್ ದಾದಿ'ಗೊಂದು ಸಲಾಂ

ಇವರ ಈ ಕಾರ್ಯಕ್ಕೆ ಪತಿ ಅತುಲ್ ಮೆಹ್ತಾ ಕೂಡ ಸಾಥ್​ ನೀಡಿದ್ದು, ಸರ್ಕಾರಿ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ, ಬಾಲಕಿಯರಲ್ಲಿ ವೈಯಕ್ತಿಕ ನೈರ್ಮಲ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈವೆರೆಗೂ ಒಟ್ಟು ನಾಲ್ಕು ಲಕ್ಷ 'ಮ್ಯಾಜಿಕ್​ ಕಿಟ್​'​ಗಳನ್ನು ವಿತರಿಸಿದ್ದಾರೆ. ಇವರ ಈ 'ಮ್ಯಾಜಿಕ್​ ಕಿಟ್​​'ನಲ್ಲಿ ಬಾಲಕಿಯರ ಒಳ ಉಡುಪುಗಳು, ಶ್ಯಾಂಪೂ ಪ್ಯಾಕೆಟ್​ಗಳು, ಸಾಬೂನುಗಳು ಹಾಗೂ ಸ್ಯಾನಿಟರಿ ಪ್ಯಾಡ್​ಗಳು ಇರುತ್ತವೆ.

ಈಟಿವಿ ಭಾರತದ ಜೊತೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೀನಾ ಮೆಹ್ತಾ ಅವರು ತಮ್ಮ ಸವಾಲಿನ ಪಯಣದ ಅನುಭವ ಹಂಚಿಕೊಂಡಿದ್ದಾರೆ. ಒಂದು ದಿನ ಡಸ್ಟ್‌ ಬಿನ್​ನಲ್ಲಿ ಎಸೆಯಲಾಗಿದ್ದ ಪ್ಯಾಡ್​​ಅನ್ನು ಹುಡುಗಿಯೊಬ್ಬಳು ಎತ್ತಿಕೊಳ್ಳುವುದನ್ನು ನೋಡಿದೆ. ಬಳಿಕ ಆಕೆಯೊಂದಿಗೆ ಮಾತನಾಡಿದಾಗ, ನನಗೆ ಹೊಸ ಪ್ಯಾಡ್​ಗಳನ್ನ ಖರೀದಿಸುವ ಶಕ್ತಿಯಿಲ್ಲ. ಹೀಗಾಗಿ ಇನ್ನೊಬ್ಬರು ಬಳಸಿ ಬಿಸಾಕಿದ್ದನ್ನು ತೆಗೆದುಕೊಂಡು, ಅದನ್ನು ತೊಳೆದು ಮರುಬಳಕೆ ಮಾಡುವೆ ಎಂದು ಹೇಳಿದಳು. ಈ ಘಟನೆಯಿಂದ ಪ್ರೇರಿತಳಾಗಿ ಅಂದಿನಿಂದ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್​ಗಳನ್ನ ವಿತರಿಸಲು ನಿರ್ಧರಿಸಿದೆ. 2013ರಲ್ಲಿ ಈ ಕಾರ್ಯ ಪ್ರಾರಂಭಿಸಿದ್ದು, ಕಳೆದ ಏಳು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದೇನೆ ಎಂದು ಮಾಹಿತಿ ನೀಡಿದರು.

ಪ್ರಾರಂಭದಲ್ಲಿ ನನ್ನ ಪತಿ ಬಡ ಹುಡುಗಿಯರಿಗಾಗಿ ಸ್ಯಾನಿಟರಿ ಪ್ಯಾಡ್​ಗಳನ್ನು ಕೊಳ್ಳಲು 25 ಸಾವಿರ ರೂಪಾಯಿಗಳನ್ನ ನೀಡಿದ್ದರು. ನಮಗೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಯಿತು. ಆದರೆ ಎಂದಿಗೂ ಈ ಸೇವೆಯಿಂದ ಹಿಂದೆ ಸರಿಯಬಾರದು ಎಂದು ನಿರ್ಧರಿಸಿದೆವು. ಇದೀಗ ನಮ್ಮ ಕಾರ್ಯವನ್ನು ಪ್ರಧಾನಿ ಮೋದಿಯವರು ಗುರುತಿಸಿದ್ದಾರೆ. ಆರ್ಥಿಕವಾಗಿ ಬಲವಾಗಿರುವವರು ಈ ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರ ಬಾಳಿಗೆ ಬೆಳಕಾಗಲಿ ಎಂಬುದೇ ನಮ್ಮ ಆಶಯ ಎಂದು ಮೆಹ್ತಾ ಹೇಳುತ್ತಾರೆ.

ಮೆಹ್ತಾ ದಂಪತಿ ಸ್ಥಾಪಿಸಿರುವ 'ಮಾನುನಿ' ಎಂಬ ಟ್ರಸ್ಟ್‌ನ ಅಡಿಯಲ್ಲಿ ಈ ಕಾರ್ಯ ಮಾಡುತ್ತಾ ಬಂದಿದ್ದು, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ 'ಪ್ಯಾಡ್ ಮ್ಯಾನ್' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್​ ನಟ ಅಕ್ಷಯ್ ಕುಮಾರ್, ಟ್ರಸ್ಟ್‌ಗೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.