ಛತ್ತೀಸ್ಗಢ/ಭಿಲೈ: ಕೊರೊನಾ ವೈರಸ್ ನಿಯಂತ್ರಿಸಲು ಜನ ಮೂಢನಂಬಿಕೆಯ ಮೊರೆ ಹೋಗಿದ್ದಾರೆ. ಛತ್ತೀಸ್ಗಢದ ಭಿಲೈನಲ್ಲಿ ಕೊರೊನಾ ಎಂಬುದು '' ದೇವಿ''ಅವಳನ್ನು ನಾವು ಓಡಿಸುತ್ತೇವೆ ಎಂದು ಮಹಿಳೆಯರು ಪೂಜೆ ಮಾಡುತ್ತಿದ್ದಾರೆ.
ಕೊರೊನಾ ಎಂಬುದು ವೈರಸ್ ಅಲ್ಲ, ಅದೊಂದು ದೇವಿ ಎಂದು ಮಹಿಳೆಯರು ದರ್ಗಾಕ್ಕೆ ತೆರಳಿ ಕೊರೊನಾ ದೇವಿ ಹೋಗಮ್ಮ ಅಂತ ಪೂಜೆ ಮಾಡ್ತಿದ್ದಾರೆ. ಇಲ್ಲಿ ವಾಸವಾಗಿರುವ ಬಿಹಾರ ಉತ್ತರ ಪ್ರದೇಶದ ಮಹಿಳೆಯರು ಕೊರೊನಾ ವೈರಸ್ ಅಲ್ಲ ದೇವಿ. ದೇವಿಗೆ ಕೋಪ ಬಂದಿದೆ ಅದಕ್ಕೆ ಹೀಗೆ ಆಗ್ತಿದೆ. ನಾವು ಸರಿಯಾಗಿ ಪೂಜೆ ಮಾಡಿದರೆ ಈ ದೇವಿ ನಮ್ಮ ದೇಶ ತೊರೆದು ಹೋಗುತ್ತಾಳೆ ಅಂತ ಪೂಜೆ-ಪುನಸ್ಕಾರಗಳ ಮೊರೆ ಹೋಗಿದ್ದಾರೆ.
ಕೊರೊನಾ ದೇವಿ ಪೂಜೆ ಹೇಗೆ ಗೊತ್ತಾ?
9 ಶುಭಸಂಖ್ಯೆ, ಹೀಗಾಗಿ ಆ ಸಂಖ್ಯೆಯನ್ನು ಶುಭವೆಂದು ಪರಿಗಣಿಸಿ, 9 ಸಿಹಿತಿಂಡಿಗಳು, 9 ಹೂವುಗಳು, 9 ಧಾನ್ಯಗಳು, 9 ಲವಂಗ, ಬೆಲ್ಲ ಮತ್ತು ನೀರನ್ನು ಇಟ್ಟು ಕೊರೊನಾ ದೇವಿಯನ್ನು ಪೂಜಿಸಬೇಕು. ಪೂಜೆಯ ನಂತರ ಈ ಎಲ್ಲಾ ವಸ್ತುಗಳನ್ನು ನೆಲವನ್ನು ಅಗೆದು ಅವುಗಳನ್ನು ಹೂಳಲಾಗುತ್ತದೆ ಅಂತ ಈ ಮಹಿಳೆಯರು ತಿಳಿಸಿದ್ದಾರೆ.