ETV Bharat / bharat

ಮಗಳ ಎದುರೇ ಭೀಕರವಾಗಿ ಕೊಲೆಯಾದ ತಾಯಿ: 'ಸೋಷಿಯಲ್ ಮೀಡಿಯಾ' ಸ್ನೇಹಿತನಿಂದ ಕೃತ್ಯ! - Woman Murdered By Social Media Friend

ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಗೆಳೆಯನೋರ್ವ ಮಹಿಳೆಯ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

Women murdered by social media friend
Women murdered by social media friend
author img

By

Published : Jan 29, 2021, 9:55 PM IST

ಇಂದೋರ್​(ಮಧ್ಯಪ್ರದೇಶ): ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ಮಹಿಳೆಯೋರ್ವಳನ್ನು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. 26 ವರ್ಷದ ಮಹಿಳೆ ಭೀಕರವಾಗಿ ಕೊಲೆಯಾಗಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

'ಸೋಷಿಯಲ್ ಮೀಡಿಯಾ' ಸ್ನೇಹಿತನಿಂದ ಕೃತ್ಯ!

ಏನಿದು ಘಟನೆ?

ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾ ಎಂಬ ಮಹಿಳೆ ಸೌರಭ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿದ್ದಾಳೆ. ಕಳೆದ ಒಂದು ವರ್ಷಗಳಿಂದ ಇಬ್ಬರು ಚಾಟಿಂಗ್ ನಡೆಸುವುದರ ಜತೆಗೆ ಮೇಲಿಂದ ಮೇಲೆ ಭೇಟಿಯಾಗಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಪ್ರಿಯಾ ತನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಸೌರಭ ಕೋಪಗೊಂಡಿದ್ದಾನೆ.

ಇದರ ಬೆನ್ನಲ್ಲೇ ತನ್ನೊಂದಿಗೆ ಮಾತನಾಡಬೇಕೆಂದು ಆಕೆಯನ್ನು ಕರೆಯಿಸಿಕೊಂಡಿದ್ದಾನೆ. ಈ ವೇಳೆ ಮಹಿಳೆ ಆರು ವರ್ಷದ ಮಗಳೊಂದಿಗೆ ಆತ ಹೇಳಿರುವ ಸ್ಥಳಕ್ಕಾಗಮಿಸಿದ್ದಾಳೆ. ಈ ವೇಳೆ ಚಾಕುವಿನಿಂದ ಆಕೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದರ ವಿಡಿಯೋ ಸ್ಥಳೀಯ ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Women murdered by social media friend
ಕೊಲೆಯಾದ ಮಹಿಳೆ ಪ್ರಿಯಾ

ಈ ವೇಳೆ ಸೌರಭ ಕಂಠಪೂರ್ತಿ ಮದ್ಯಪಾನ ಮಾಡಿದ್ದಾಗಿ ತಿಳಿದು ಬಂದಿದೆ. ಇನ್ನು ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡಿದ್ದಾಳೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗಿಲ್ಲ.

ಈಗಾಗಲೇ ಆರೋಪಿಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕುಡಿದ ನಶೆಯಲ್ಲಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಿಯಾ ಅಗರ್​ವಾಲ್ ಪತಿ ಶ್ಯಾಮ್ ಜತೆ ಇಂದೋರ್​ನ ಲಸೂದಿಯಾದಲ್ಲಿ ವಾಸವಾಗಿದ್ದಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.