ರಾಜಸ್ಥಾನ: ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯ ಫ್ಲೈ ಪಾಸ್ಟ್‌ನ ನೇತೃತ್ವವನ್ನು ಅಜ್ಮೇರ್ನ ಏರ್ಫೋರ್ಸ್ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ವಹಿಸಲಿದ್ದಾರೆ.
ಗಣರಾಜ್ಯೋತ್ಸವದ ಇತಿಹಾಸದಲ್ಲೇ ಮಹಿಳಾ ಪೈಲಟ್, ಫ್ಲೈ ಪಾಸ್ಟ್‌ನ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ವಾಯುಸೇನೆಯ ಫ್ಲೈಟ್ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ಮೂಲತಃ ನಾಗೌರಿನ ಪ್ರೇಂಪುರ ಗ್ರಾಮದವರು.
ಸ್ವಾತಿ ರಾಥೋಡ್ ಅಜ್ಮೇರ್ನ ಮಯೂರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಜೈಪುರದ ಐಸಿಜಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಇತ್ತೀಚೆಗೆ ಸ್ವಾತಿಯನ್ನು ಪ್ರಸ್ತುತ ರಾಜಸ್ಥಾನದ ವಾಯುನೆಲೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸ್ವಾತಿಗೆ ಫ್ಲೈಟ್ ಪಾಸ್ಟ್‌ನ ಜವಾಬ್ದಾರಿ ನೀಡಲಾಗಿದೆ.
ಕೇರಳದಲ್ಲಿ ಪ್ರವಾಹ ಸಂದರ್ಭದಲ್ಲಿ ಸ್ವಾತಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರು. ಸ್ವಾತಿಯ ತಂದೆ ಡಾ.ಭವಾನಿ ಸಿಂಗ್ ಅವರು ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದಾರೆ.