ETV Bharat / bharat

ಶಬರಿಮಲೆ ಮಹಿಳೆಯರ ಪ್ರವೇಶ ವಿವಾದ: ಬಿಂದು ಮೇಲೆ ದಾಳಿ, ತೃಪ್ತಿ ವಿರುದ್ಧ ಪ್ರತಿಭಟನೆ - ತೃಪ್ತಿ ದೇಸಾಯಿ ಲೇಟೆಸ್ಟ್​ ಸುದ್ದಿ

ಶಬರಿಮಲೆ ದೇವಸ್ಥಾನಕ್ಕೆ ಅಯ್ಯಪ್ಪನ ದರ್ಶನ ಪಡೆಯಲು ಬಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಅಯ್ಯಪ್ಪ ಭಕ್ತನೋರ್ವ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಯ ಹೊರಗಡೆಯೇ ಖಾರದ ಪುಡಿ ಎರಚಿ ದಾಳಿ ಮಾಡಿದ್ದಾನೆ.

activist Bindu Ammini attacked in Kocchi
ಶಬರಿಮಲೆ ಮಹಿಳೆಯರ ಪ್ರವೇಶ ವಿವಾದ
author img

By

Published : Nov 26, 2019, 1:52 PM IST

ಕೊಚ್ಚಿ (ಕೇರಳ): ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಹಿಂಸಾಚಾರಕ್ಕೆ ತಿರುಗಿದೆ.

ಶಬರಿಮಲೆ ದೇವಸ್ಥಾನಕ್ಕೆ ಅಯ್ಯಪ್ಪನ ದರ್ಶನ ಪಡೆಯಲು ಬಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಅಯ್ಯಪ್ಪ ಭಕ್ತನೋರ್ವ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಯ ಹೊರಗಡೆಯೇ ಖಾರದ ಪುಡಿ, ಪೆಪ್ಪರ್​ ಸ್ಪ್ರೇ ಎರಚಿ ದಾಳಿ ಮಾಡಿದ್ದಾನೆ.

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಖಾರದ ಪುಡಿ ಎರಚಿ ದಾಳಿ

ಜನವರಿ 2 ರಂದು ಶಬರಿಮಲೆ ದೇವಸ್ಥಾನ ಪ್ರವೇಶಿಸುವಲ್ಲಿ ಯಶಸ್ವಿಯಾದ ಇಬ್ಬರು ಮಹಿಳೆಯರಲ್ಲಿ ಒಬ್ಬರೇ ಈ ಬಿಂದು ಅಮ್ಮಿನಿ. ಇಂದು ಅವರು ಸೇರಿದಂತೆ ಆರು ಮಹಿಳಾ ಹಕ್ಕುಗಳ ಹೋರಾಟಗಾರರು ಮಹಾರಾಷ್ಟ್ರದ ಪುಣೆ ಮೂಲದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಜೊತೆ ಅಯ್ಯಪ್ಪನ ದರ್ಶನ ಪಡೆಯಲೆಂದು ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ. ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇವರು, ಶಬರಿಮಲೆ ದೇವಸ್ಥಾನಕ್ಕೆ ತೆರಳಲು ರಕ್ಷಣೆ ಕೋರಿ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದಾರೆ. ಈ ವೇಳೆ ಬಿಂದು ಮತ್ತು ಅಯ್ಯಪ್ಪ ಭಕ್ತರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ಅಯ್ಯಪ್ಪ ಭಕ್ತ ಬಿಂದುವಿನ ಮೇಲೆ ಖಾರದ ಪುಡಿಯಿಂದ ದಾಳಿ ಮಾಡಿದ್ದಾನೆ.

ಪುಣೆ ಮೂಲದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ

ತೃಪ್ತಿ ದೇಸಾಯಿ ವಿರುದ್ಧ ಅಯ್ಯಪ್ಪ ಭಕ್ತರ ಪ್ರತಿಭಟನೆ:

ಪುಣೆ ಮೂಲದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ, ಇವರು ಕಳೆದ ವರ್ಷ ನವಂಬರ್​ನಲ್ಲಿ ಶಬರಿಮಲೆ ಪ್ರವೇಶಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಇದೀಗ ಇವರು ಮತ್ತೆ ಆಗಮಿಸಿರುವ ಸುದ್ದಿ ಕೇಳಿರುವ ಶಬರಿಮಲ ಭಕ್ತರ ದೊಡ್ಡ ಗುಂಪೊಂದು ಪೊಲೀಸ್ ಕಚೇರಿಯ ಮುಂದೆ ಜಮಾಯಿಸಿದೆ. ಆಕೆಗೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಶಬರಿಮಲ ಸ್ತುತಿಗೀತೆಗಳನ್ನು ಹಾಡಲು ಪ್ರಾರಂಭಿಸಿದೆ.

Shabarimala issue
ತೃಪ್ತಿ ದೇಸಾಯಿ ವಿರುದ್ಧ ಅಯ್ಯಪ್ಪ ಭಕ್ತರ ಪ್ರತಿಭಟನೆ

ಕೊಚ್ಚಿಯಲ್ಲಿ ಮರ ಬಿದ್ದು ಶಬರಿಮಲಾ ಯಾತ್ರಿಕರಿಗೆ ಗಾಯ:

ಇಂದು ಮುಂಜಾನೆ ಕೊಚ್ಚಿಯ ಮರಕೂಟಂ ಪ್ರದೇಶದ ಬಳಿ ಮರವೊಂದು ಕುಸಿದು ಬಿದ್ದ ಪರಿಣಾಮ 10 ಮಂದಿ ಶಬರಿಮಲಾ ಯಾತ್ರಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬನನ್ನು ಪಥನಮತ್ತಿಟ್ಟ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೊಚ್ಚಿಯಲ್ಲಿ ಮರ ಬಿದ್ದು ಶಬರಿಮಲಾ ಯಾತ್ರಿಕರಿಗೆ ಗಾಯ

ದೇಸಾಯಿ ಭೇಟಿ ಹಿಂದೆ ಪಿತೂರಿ ನಡೆದಿದೆ: ಕೇರಳದ ಸಚಿವ ಆರೋಪ

ತೃಪ್ತಿ ದೇಸಾಯಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಭದ್ರಕೋಟೆಯಾದ ಪುಣೆಯಿಂದ ಬಂದಿದ್ದು, ಅವರ ಈ ಶಬರಿಮಲೆ ಭೇಟಿಯ ನಿರ್ಧಾರದ ಹಿಂದೆ ಏನೋ ಪಿತೂರಿ ನಡೆದಿದೆ. ಶಾಂತಿಯುತವಾಗಿ ನಡೆಯುವ ಯಾತ್ರೆಯ ವೇಳೆ ತೊಂದರೆ ಸೃಷ್ಟಿಸುವ ಉದ್ದೇಶದಿಂದಲೇ ಆಕೆ ಇಲ್ಲಿಗೆ ಬಂದಿದ್ದಾರೆ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಆರೋಪಿಸಿದ್ದಾರೆ.

Intro:Body:

for love

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.