ಬರಾಬಂಕಿ (ಉತ್ತರ ಪ್ರದೇಶ): ಅಪರಿಚಿತ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದಲ್ಲದೇ ಆಕೆಯ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿದ್ದಾರೆ. ಬಳಿಕ ಆಕೆಯ ತುಂಡಾದ ದೇಹವನ್ನು ಸೂಟ್‌ಕೇಸ್ ಮತ್ತು ಬ್ಯಾಗ್ವೊಂದರಲ್ಲಿ ತುಂಬಿ ಬಂದ್ ಆಗಿರುವ ಫ್ಯಾಕ್ಟರಿವೊಂದರ ಬಳಿ ಎಸೆದು ಪರಾರಿಯಾಗಿರುವ ಘಟನೆ ಬರಾಬಂಕಿಯಲ್ಲಿ ನಡೆದಿದೆ.
ಅನುಮಾನಾಸ್ಪದ ಸೂಟ್‌ಕೇಸ್ ಬಗ್ಗೆ ಕಾರ್ಖಾನೆಯ ಹೊರಗೆ ಮಲಗಿರುವ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬ್ಯಾಗ್ ಪರಿಶೀಲಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಇನ್ನು ಚೀಲದಲ್ಲಿ ಸುಮಾರು 20 ವರ್ಷದ ಮಹಿಳೆಯ ದೇಹದ ಭಾಗಗಳು ಕಂಡುಬಂದಿವೆ’ ಎಂದು ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಮೀಪದಲ್ಲಿ ಕಂಡುಬಂದ ಕೆಲವು ಪಾಲಿಥೀನ್ ಚೀಲಗಳಲ್ಲಿ ತಲೆ ಮತ್ತು ಮಹಿಳೆಯ ಕಾಲುಗಳಿದ್ದು, ಉಳಿದ ದೇಹದ ಭಾಗಗಳು ಸೂಟ್‌ಕೇಸ್‌ನೊಳಗೆ ಇದ್ದವು ಎಂದು ಸಿಂಗ್ ತಿಳಿಸಿದ್ದಾರೆ.
ಪೊಲೀಸ್ ವರಿಷ್ಟಾಧಿಕಾರಿ ಅರವಿಂದ್ ಚತುರ್ವೇದಿ ಮಾತನಾಡಿ, ಶವವನನ್ನು ಸುಮಾರು ಎರಡು ದಿನಗಳಷ್ಟು ಎಸೆದಿರಬಹುದು. ಚೀಲದಿಂದ ಹೊರಹೊಮ್ಮುವ ದುರ್ವಾಸನೆಯಿಂದಾಗಿ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದರು.
ಈ ಅಪರಿಚಿತ ಮಹಿಳೆಯನ್ನು ಬೇರೆಡೆ ಕೊಲೆ ಮಾಡಿದ್ದು, ಆಕೆಯ ಶವವನ್ನು ಇಲ್ಲಿ ವಿಲೇವಾರಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಹೇಳಿದರು.