ETV Bharat / bharat

ವಿದೇಶಕ್ಕೆ ಭೇಟಿ ನೀಡದೆಯೇ ಈ ಮಹಿಳೆಗೆ ಅಂಟಿದ ಕೊರೊನಾ - ಪುಣೆ ಕೊವಿಡ್​-19 ಪ್ರಕರಣಗಳು

ಯಾವುದೇ ವಿದೇಶ ಪ್ರಯಾಣ ಬೆಳೆಸಿರದ ಮಹಾರಾಷ್ಟ್ರದ 40 ವರ್ಷದ ಮಹಿಳೆಯೊಬ್ಬರಿಗೆ ಕೊವಿಡ್​-19 ಇರುವುದು ವರದಿಯಾಗಿದೆ.

pune corona cases
ಕೊರೊನಾ
author img

By

Published : Mar 21, 2020, 12:33 PM IST

ಪುಣೆ: ಮಹಾರಾಷ್ಟ್ರದ 40 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಭಾರತಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ ಮಹಿಳೆಗೆ ಎಚ್​1ಎನ್​1 ಇರಬಹುದೆಂಬ ಶಂಕೆಯ ಮೇರೆಗೆ ಆಕೆಯ ಗಂಟಲಿನ ದ್ರವದ ಮಾದರಿಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಕೊವಿಡ್​-19 ಇರುವುದು ವರದಿಯಾಗಿದೆ.

ವಿಶೇಷವೆಂದರೆ ಈ ಮಹಿಳೆ ಯಾವುದೇ ವಿದೇಶ ಪ್ರಯಾಣ ಬೆಳೆಸಿ ಬಂದಿಲ್ಲ. ಆದರೆ ಮಾ.3 ರಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನವಿ ಮುಂಬಯಿಯ ವಾಶಿಗೆ ತೆರಳಿ ಬಂದಿದ್ದರು. ಈ ಮಹಿಳೆ ಖಂಡಿತವಾಗಿಯೂ ವಿದೇಶಕ್ಕೆ ಪ್ರಯಾಣ ಬೆಳೆಸಿ ಬಂದವರನ್ನು ಸಂಪರ್ಕಿಸಿರುತ್ತಾರೆ. ಮುಂಬೈಗೆ ಆಕೆ ಬೆಳೆಸಿದ ಕ್ಯಾಬ್ ಪ್ರಯಾಣದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಹಾಗೂ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಉನ್ನತ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.