ಗೋರಖ್ಪುರ್: ಪೋನ್ನಲ್ಲಿ ಮಾತನಾಡುತ್ತಾ ಬೆಡ್ ರೂಮ್ನಲ್ಲಿ ಬೆಡ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಯುವತಿಯೋರ್ವಳಿಗೆ ಹಾವು ಕಚ್ಚಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಗೋರಖ್ಪುರ್ದಲ್ಲಿ ನಡೆದಿದೆ.
ಗೋರಖ್ಪುರ್ನ ರಿಯಾನ್ವಿ ಗ್ರಾಮದಲ್ಲಿ ವಾಸವಾಗಿದ್ದ ಗೀತಾ ಗಂಡ ಜೈಸಿಂಗ್ ಯಾದವ್ ಥಾಯ್ಲೆಂಡ್ನಲ್ಲಿ ಕೆಲಸ ಮಾಡುತ್ತಿದ್ದ. ಆತನೊಂದಿಗೆ ಮಾತನಾಡುತ್ತಿದ್ದ ವೇಳೆ ಆಕೆಗೆ ಹಾವು ಕಚ್ಚಿದ್ದು, ತಕ್ಷಣವೇ ಮೂರ್ಛೆ ಹೋದ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.
ವಾಪಸ್ ಮನೆಗೆ ಬಂದು ಬೆಡ್ರೂಮ್ ಪರಿಶೀಲಿಸಿದಾಗ ಎರಡು ಹಾವು ಪತ್ತೆಯಾಗಿದೆ. ಸಿಟ್ಟಿನಲ್ಲೇ ಅವುಗಳನ್ನ ಹೊಡೆದು ಸಾಯಿಸಲಾಗಿದೆ. ಎರಡು ಹಾವುಗಳು ಮನೆಯೊಳಗೆ ಹೋಗಿದ್ದ ವಿಷಯ ಈಕೆಗೆ ಗೊತ್ತಾಗದೇ ಏಕಾಏಕಿ ಅವುಗಳ ಮೇಲೆ ಕುಳಿತುಕೊಂಡಿದ್ದರಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.