ETV Bharat / bharat

ಅಳಿಯನ ಕೊಲೆಗೈದು ಪೊಲೀಸರ ಮುಂದೆ ಹಾಜರಾದ ಮಹಿಳೆ!

ಮಗಳ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತಾಯಿ ಇದೀಗ ಆತನ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

Mother-in-law killed her daughter's husband

author img

By

Published : Oct 30, 2020, 3:22 AM IST

ಹೈದರಾಬಾದ್​: ಅಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ಆತನ ಕೊಲೆ ಮಾಡಿ ಪೊಲೀಸರ ಮುಂದೆ ಹಾಜರಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

2019ರಲ್ಲಿ ನವೀನ್​ 19 ವರ್ಷದ ಯುವತಿ ವಂದನಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಕೆಲವೇ ದಿನಗಳಲ್ಲಿ ಯುವತಿಯ ತಾಯಿ ಜತೆ ಆತ ಅನೈತಿಕ ಸಂಪರ್ಕ ಸಾಧಿಸಿದ್ದಾನೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ವಂದನಾ ಇಬ್ಬರಿಗೂ ವಾರ್ನ್​ ಮಾಡಿದ್ದಾಳೆ. ಆದರೆ ಅವರು ಮಾತು ಕೇಳದೇ ತಮ್ಮ ಹಳೇ ಚಾಳಿ ಮುಂದುವರೆಸಿದ್ದರಿಂದ ವಂದನಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದೇ ಪ್ರಕರಣದ ಮೇಲೆ ಅಳಿಯ ನವೀನ್​ ಬಂಧನಕ್ಕೊಳಗಾಗಿದ್ದನು. ಕೆಲ ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದಾನೆ.

ನೇರವಾಗಿ ಅತ್ತಿಗೆ ಅನಿತಾ ಮನೆಗೆ ಬಂದಿರುವ ನವೀನ್​ ಆಕೆಯ ಮೇಲೆ ವಾಗ್ದಾಳಿ ನಡೆಸಿ, ಕಿರುಕುಳ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ಅತ್ತೆ, ನವೀನ್​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ. ಜತೆಗೆ ಉಪ್ಪಾಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.