ಶ್ರಿನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಬಾಟಾಮಾಲೋ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದ್ದು, ಈ ವೇಳೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಪೈಕಿ ಒಬ್ಬರು ಮಹಿಳೆಯೂ ಸಹ ಗುಂಡೇಟಿಗೆ ಬಲಿಯಾಗಿದ್ದಾರೆ.
ಘಟನೆಯಲ್ಲಿ ಓರ್ವ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಶ್ರೀನಗರದ ಭಾಗದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಎನ್ಕೌಂಟರ್ನಲ್ಲಿ ಮೂವರು ಉಗ್ರರು ಸಾವನೊಪ್ಪಿದ್ದಾರೆ.
ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆ ಸಿಬ್ಬಂದಿ ಬಳಿಕ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿ ಸ್ಥಳವನ್ನು ಉಗ್ರರಿಂದ ಮುಕ್ತಗೊಳಿಸಿದ್ದಾರೆ. ಇನ್ನೂ ಈ ಕುರಿತು ಸಿಆರ್ಪಿಎಫ್ ಐಜಿ ಚಾರು ಸಿನ್ಹಾ ಮಾತನಾಡಿ, ಉಗ್ರರು ಅಡಗಿದ್ದ ಸ್ಥಳವನ್ನು ಈಗಾಗಲೇ ಕ್ಲಿಯರ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.
-
#SrinagarEncounterUpdate: 02 more #unidentified #terrorists killed (total 03). Search going on. Further details shall follow. @JmuKmrPolice https://t.co/jM8sq21bFn
— Kashmir Zone Police (@KashmirPolice) September 17, 2020 " class="align-text-top noRightClick twitterSection" data="
">#SrinagarEncounterUpdate: 02 more #unidentified #terrorists killed (total 03). Search going on. Further details shall follow. @JmuKmrPolice https://t.co/jM8sq21bFn
— Kashmir Zone Police (@KashmirPolice) September 17, 2020#SrinagarEncounterUpdate: 02 more #unidentified #terrorists killed (total 03). Search going on. Further details shall follow. @JmuKmrPolice https://t.co/jM8sq21bFn
— Kashmir Zone Police (@KashmirPolice) September 17, 2020
ಇನ್ನೂ ಪ್ರಸಕ್ತ ವರ್ಷ ಕಾಶ್ಮೀರದಲ್ಲಿ ಈವರೆಗೆ 177 ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇದರಲ್ಲಿ 12 ಉಗ್ರರು ಜಮ್ಮು ಪ್ರದೇಶದಲ್ಲಿ ಹತರಾಗಿದ್ದಾರೆ. ಈ ನಡುವೆ ಉಗ್ರ ಸಂಘಟನೆ ಸೇರಿದ್ದ 20 ಮಂದಿಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗಿದೆ ಎಂದು ಶ್ರೀನಗರ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಫೈರಿಂಗ್ ವೇಳೆ ನಾಗರಿಕರು ಸಾವನಪ್ಪುವುದನ್ನು ಸಹಿಸಲಾಗದು. ಇನ್ನೂ ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.