ETV Bharat / bharat

ಉತ್ತರಪ್ರದೇಶ: ವರದಕ್ಷಿಣೆಗಾಗಿ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ - ಅಳಿಯಂದಿರ ವಿರುದ್ಧ ಪೊಲೀಸರು ಪ್ರಕರಣ

ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ಮಹಿಳೆಯೊರ್ವಳನ್ನು ಆಕೆಯ ಗಂಡ ಮತ್ತು ಅಳಿಯಂದಿರು ಸುಟ್ಟುಹಾಕಿದ್ದಾರೆ.

ವರದಕ್ಷಿಣೆಗಾಗಿ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ
ವರದಕ್ಷಿಣೆಗಾಗಿ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ
author img

By

Published : May 26, 2020, 7:00 PM IST

ಲಲಿತ್‌ಪುರ: ವರದಕ್ಷಿಣೆಗಾಗಿ ಅಳಿಯಂದಿರು ಮತ್ತು ಗಂಡ ಮಹಿಳೆಗೆ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಸೋಮವಾರ ರಾತ್ರಿ ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ.

ಮಹ್ರೋನಿ ಪಟ್ಟಣದ ನಿವಾಸಿ ಸಂತೋಷ್ ಭೋಡಲೆ ಎನ್ನುವರು ತಮ್ಮ ಮಗಳು ನೇಹಾಳನ್ನು ಆಜಾದ್ ತಿವಾರಿ ಅವರಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವರದಕ್ಷಿಣೆಗಾಗಿ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ

ಕಳೆದ ರಾತ್ರಿ ಗಂಡ ಮತ್ತು ಹೆಂಡತಿ ಜಗಳವಾಡುತ್ತಿದ್ದರು. ಗಂಡ ಅಜಾದ್​​ ನೇಹಾಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ತರಲು ನೇಹಾ ನಿರಾಕರಿಸಿದ್ದಕ್ಕೆ ಗಂಡ ಮತ್ತು ಆಕೆಯ ಅಳಿಯಂದಿರು ಕೈಗೆ ಹಗ್ಗ ಕಟ್ಟಿ ಬೆಂಕಿ ಹಚ್ಚಿದ್ದಾರೆ. ವರದಕ್ಷಿಣೆಗಾಗಿ ಕಳೆದ ಎರಡು ವರ್ಷಗಳಿಂದ ಈಕೆಯನ್ನು ಹಿಂಸಿಸುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಮೃತಪಟ್ಟಿದ್ದಾಳೆ. ಮೃತ ಮಹಿಳೆ ಪತಿ ಆಜಾದ್ ತಿವಾರಿ ಸೇರಿದಂತೆ ಅಳಿಯಂದಿರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆರೋಪಿಗಳೆಲ್ಲರೂ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.