ನವದೆಹಲಿ: ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕ್ನ ಯುದ್ಧ ವಿಮಾನವನ್ನ ಹೊಡೆದುರುಳಿಸಿದ ಬಳಿಕ ಅವರ ಹೆಸರಿನಷ್ಟೇ ಅವರು ಬಿಟ್ಟಿರುವ ಮೀಸೆ ಕೂಡ ಹೆಸರುವಾಸಿಯಾಗಿತ್ತು. ಇದೀಗ ಇದೇ ವಿಷಯವಾಗಿ ಲೋಕಸಭೆಯಲ್ಲೂ ಚರ್ಚೆಯಾಗಿದೆ.
ಕಾಂಗ್ರೆಸ್ನ ಲೋಕಸಭೆ ಮುಖಂಡ ಅಧೀರ್ ರಂಜನ್ ಚೌಧರಿ ಮಾತನಾಡಿದ್ದು, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಗೌರವಿಸಬೇಕಾಗಿದ್ದು, ಅವರು ಬಿಟ್ಟಿರುವ ಮೀಸೆಯನ್ನ 'ರಾಷ್ಟ್ರೀಯ ಮೀಸೆ' ಎಂದು ಘೋಷಣೆ ಮಾಡುವಂತೆ ತಿಳಿಸಿದ್ದಾರೆ.
-
Congress Lok Sabha leader, Adhir Ranjan Chowdhury in Lok Sabha: Wing Commander Abhinandan Varthaman should be awarded and his moustache should be made 'national moustache'. (file pic of Abhinandan Varthaman) pic.twitter.com/0utFf61wwl
— ANI (@ANI) June 24, 2019 " class="align-text-top noRightClick twitterSection" data="
">Congress Lok Sabha leader, Adhir Ranjan Chowdhury in Lok Sabha: Wing Commander Abhinandan Varthaman should be awarded and his moustache should be made 'national moustache'. (file pic of Abhinandan Varthaman) pic.twitter.com/0utFf61wwl
— ANI (@ANI) June 24, 2019Congress Lok Sabha leader, Adhir Ranjan Chowdhury in Lok Sabha: Wing Commander Abhinandan Varthaman should be awarded and his moustache should be made 'national moustache'. (file pic of Abhinandan Varthaman) pic.twitter.com/0utFf61wwl
— ANI (@ANI) June 24, 2019
ಇದೇ ವೇಳೆ, ಬಾಲಕೋಟ್ನಲ್ಲಿ ಭಾರತೀಯ ವಾಯುಸೇನೆ ಉಗ್ರರ ಮೇಲೆ ನಡೆಸಿರುವ ದಾಳಿಯನ್ನ ಕಾಂಗ್ರೆಸ್ ಪಕ್ಷ ಸಮರ್ಥನೆ ಮಾಡಿಕೊಳ್ಳಲಿದ್ದು, ಮಹತ್ವದ ಕಾರ್ಯ ನಿರ್ವಹಿಸಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.
ಫೆ.14ರಂದು ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ಬಾಲಕೋಟ್ನಲ್ಲಿ ಉಗ್ರ ಕ್ಯಾಂಪ್ಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮರುದಿನ ಪಾಕ್ ವಾಯುದಾಳಿ ನಡೆಸಲು ಮುಂದಾದಾಗ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ವಿಮಾನ ಹೊಡೆದುರುಳಿಸಿ, ಅಲ್ಲಿನ ಗಡಿಯೊಳಗೆ ಬಿದ್ದಿದ್ದರು. ಈ ವೇಳೆ ಅವರನ್ನ ಪಾಕ್ ಬಂಧನ ಮಾಡಿತ್ತು. ತದನಂತರ ಭಾರತಕ್ಕೆ ಮಣಿದ ಪಾಕ್ ಅವರನ್ನ ವಾಘಾ ಗಡಿ ಮೂಲಕ ಭಾರತಕ್ಕೆ ಕಳುಹಿಸಿತ್ತು.