ETV Bharat / bharat

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ 2 ಕೊರೊನಾ ಲಸಿಕೆ ಘೋಷಿಸಿದರೂ ಅಚ್ಚರಿಯಿಲ್ಲ: ಇಲ್ಲಿದೆ ಲಾಜಿಕ್​! - ಕೊರೊನಾ ವೈರಸ್ ಲಸಿಕೆ ಇತ್ತೀಚಿನ ಸುದ್ದಿ

ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಪ್ರೋಟೋಕಾಲ್​ ಅನುಸರಿಸಲಾಗಿದೆ ಎಂದು ಐಸಿಎಂಆರ್​ ಸ್ಪಷ್ಟನೆ ನೀಡಿದೆ. ರಾಜಕೀಯ ದೃಷ್ಟಿಕೋನದಿಂದ ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಭಾರತೀಯ ಲಸಿಕೆಗಳ ಆಗಮನ ಘೋಷಿಸಲು ಸಾಕಷ್ಟು ಉತ್ತಮ ಕಾರಣಗಳಿವೆ.

PM Modi
ಪ್ರಧಾನಿ ಮೋದಿ
author img

By

Published : Aug 14, 2020, 9:06 PM IST

ನವದೆಹಲಿ: ಆಗಸ್ಟ್ 11ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೋವಿಡ್​-19 ಸಾಂಕ್ರಾಮಿಕ ರೋಗಕ್ಕೆ 'ಸ್ಪುಟ್ನಿಕ್-ವಿ' ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದರು. ತಮ್ಮ ಇಬ್ಬರು ಪುತ್ರಿಯರಲ್ಲಿ ಓರ್ವ ಪುತ್ರಿಗೆ ಲಸಿಕೆ ನೀಡಿದ್ದು, ಉತ್ತಮವಾಗಿ ಸ್ಪಂದಿಸಿದ್ದಾರೆ. ಲಸಿಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಪುಟಿನ್ ಘೋಷಣೆಯಿಂದ ಪ್ರೇರಿತರಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ನಾಳೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದೇ ರೀತಿಯ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ.

ನಾಳೆ ಘೋಷಿಸಬಹುದು ಎಂಬುದಕ್ಕೆ ಇರುವ ಲಾಜಿಕ್​ಗಳು:

ಪುಟಿನ್ ಅವರಂತೆಯೇ ಮೋದಿ ಅವರು ಅಪಾಯ ಮೈಮೇಲೆ ಎಳೆದುಕೊಳ್ಳುವ ಮತ್ತು ಧೈರ್ಯಶಾಲಿ ನಿರ್ಧಾರ ಘೋಷಿಸುವ ಪ್ರಬಲ ಇಚ್ಛಾಶಕ್ತಿಯುಳ್ಳ ವ್ಯಕ್ತಿತ್ವದವರು ಎಂದು ಊಹಿಸಲಾಗಿದೆ. ರಷ್ಯಾದಂತೆಯೇ ಭಾರತವು ಅತ್ಯಂತ ಕೆಟ್ಟ ಕೋವಿಡ್​-19 ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಲಸಿಕೆಗಳು ಲಭ್ಯ ಇವೆ ಎಂಬ ಸಕಾರಾತ್ಮಕ ಸಂದೇಶವು ನಾಗರಿಕರಿಗೆ ಹೊಸ ಭರವಸೆ ನೀಡುತ್ತದೆ.

ಭಾರತೀಯ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಯು ರಷ್ಯಾದ 'ಸ್ಪುಟ್ನಿಕ್-ವಿ' ಆರಂಭವಾದ ಸಮಯದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದು, ಬಹುತೇಕ ಅವರ ಸರಿಸಮಾನದ ಹಂತದಲ್ಲಿ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ರಷ್ಯಾ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಸಿದ್ಧವಾಗಿರುವ ಒಂದೇ ಲಸಿಕೆ ಹೊಂದಿದ್ದರೆ ಭಾರತದ ಎರಡು ಲಸಿಕೆಗಳು ಪ್ರಯೋಗ ಹಂತದಲ್ಲಿವೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾದ ಝೈಕೋವ್-ಡಿ ಶೀಘ್ರದಲ್ಲೇ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಿ ಮೂರನೇ ಹಂತಕ್ಕೆ ಸಿದ್ಧವಾಗಲಿವೆ.

ರಷ್ಯಾದ ಸಾರ್ವಜನಿಕ ಸಂಶೋಧನಾ ಸಂಸ್ಥೆ ಗಮಲೇಯ ರಿಸರ್ಚ್ ಇನ್​ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಸ್ಪುಟ್ನಿಕ್-ವಿ ಲಸಿಕೆ ಶೋಧಿಸಿದೆ. ಭಾರತದ ಮುಂಚೂಣಿ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹ ಕೊವಾಕ್ಸಿನ್ ಎಂಬ ಲಸಿಕೆಯ ಬೆಳವಣಿಗೆ ವೇಗಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಈ ಲಸಿಕೆಯ ಮಾದರಿಯನ್ನು ಪುಣೆಯ ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಹೊರತೆಗೆದ ವೈರಸ್ ತಳಿಗಳಿಂದ ಅಭಿವೃದ್ಧಿಪಡಿಸಲಾಗಿದೆ. ಲಸಿಕೆ ಅಭಿವೃದ್ಧಿಗೆ ಭಾರತ್ ಬಯೋಟೆಕ್‌ಗೆ ಹಸ್ತಾಂತರಿಸಲಾಗಿದೆ. ಜುಲೈ 2ರಂದು ಐಸಿಎಂಆರ್ ಮಹಾನಿರ್ದೇಶಕರು ಕೊವಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್​ಗೆ ಆಯ್ಕೆಯಾದ ಆಸ್ಪತ್ರೆಗಳಿಗೆ ಪತ್ರವೊಂದನ್ನು ಬರೆದಿದ್ದು, 'ಕ್ಲಿನಿಕಲ್ ಪ್ರಯೋಗದ ಪ್ರಾರಂಭಕ್ಕೆ ಸಂಬಂಧಿಸಿದ ಎಲ್ಲಾ ಅನುಮೋದನೆಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಸ್ವಯಂಸೇವಕರ ದಾಖಲಾತಿ ಖಚಿತಪಡಿಸಿಕೊಳ್ಳುವಂತೆ ಕೋರಿದ್ದರು.

ಪ್ರಯೋಗಗಳನ್ನು ಪೂರ್ಣಗೊಳಿಸಲು ಮತ್ತು ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆ ಬಿಡುಗಡೆ ಮಾಡುವುದನ್ನು ಘೋಷಿಸಲು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯು ಸಾಕಷ್ಟು ಮಹತ್ವದ್ದಾಗಿದೆ.

ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಪ್ರೊಟೊಕಾಲ್​ ಅನುಸರಿಸಲಾಗಿದೆ ಎಂದು ಐಸಿಎಂಆರ್​ ಸ್ಪಷ್ಟನೆ ನೀಡಿದೆ. ರಾಜಕೀಯ ದೃಷ್ಟಿಕೋನದಿಂದ ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಭಾರತೀಯ ಲಸಿಕೆಗಳ ಆಗಮನ ಘೋಷಿಸಲು ಸಾಕಷ್ಟು ಉತ್ತಮ ಕಾರಣಗಳಿವೆ.

ಭಾರತೀಯ ಕ್ಲಿನಿಕಲ್ ಟ್ರಯಲ್ ತನಿಖಾಧಿಕಾರಿಗಳು ಐಸಿಎಂಆರ್ ನಿಗದಿಪಡಿಸಿದ ಗಡುವಿನಿಂದ ಮಾನವ ಸ್ವಯಂಸೇವಕರನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ಕೋವಾಕ್ಸಿನ್ ಮತ್ತು ಝೈಕೋವ್-ಡಿ ಮೊದಲ ಹಂತದ ಪ್ರಯೋಗದಲ್ಲಿ ಯಾವುದೇ ಸುರಕ್ಷತಾ ಸಮಸ್ಯೆಗಳಿಲ್ಲದೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗುತ್ತಿದೆ.

ಆರು ತಿಂಗಳ ಅವಧಿಯಲ್ಲಿ ಭಾರತ ಕೈಗೊಂಡ ಪ್ರಯತ್ನದ ಫಲಗಳು ಇಲ್ಲಿಯವರೆಗೆ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಇಂದಿನಿಂದ ಒಂದೆರಡು ವಾರಗಳಲ್ಲಿ ಎರಡನೇ ಹಂತದ ಪ್ರಯೋಗ ಫಲಿತಾಂಶಗಳು ಸಿದ್ಧವಾಗಿರಬೇಕು. ಡಿಸಿಜಿಐ ಮುಂದಿನ ಹಂತ ಸೂಚಿಸಬೇಕಾಗುತ್ತದೆ. ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಎದುರಿಸುತ್ತಿರುವ ಭಾರತದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ 25 ಲಕ್ಷ ದಾಟಲಿದ್ದು, ಬ್ರೆಜಿಲ್ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿದೆ. ರಾಜಕೀಯ ಉದ್ದೇಶದಿಂದ ಡೊನಾಲ್ಡ್​ ಟ್ರಂಪ್ ಇದಕ್ಕೂ ಮುಂಚಿತವಾಗಿ ಘೋಷಣೆ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ.

ನಾಲ್ಕು ದಿನಗಳ ಹಿಂದೆ ಪುಟಿನ್ ಈ ಘೋಷಣೆ ಮಾಡದಿದ್ದರೆ, ಕೋವಿಡ್​ ಲಸಿಕೆಯ ಅಭಿವೃದ್ಧಿ ಘೋಷಿಸಿದ ಭಾರತವು ವಿಶ್ವದ ಮೊದಲ 'ದೇಶ' ಆಗಬಹುದಿತ್ತು. ಆಗಸ್ಟ್ 15ರಂದು ಮೋದಿ ಅವರು ಘೋಷಣೆ ಮಾಡಿದರೆ, ಭಾರತ ಎರಡನೇ ರಾಷ್ಟ್ರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.