ETV Bharat / bharat

ವಿದ್ಯಾರ್ಥಿಗಳ, ಪೋಷಕರ ಇಚ್ಛೆಯಂತೆ ಜೆಇಇ, ನೀಟ್ ಪರೀಕ್ಷೆಗಳು ನಡೆಯಲಿವೆ: ಶಿಕ್ಷಣ ಸಚಿವ ನಿಶಾಂಕ್

author img

By

Published : Aug 26, 2020, 3:35 PM IST

ಕೋವಿಡ್​ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ನಿರ್ಣಾಯಕ ಪರೀಕ್ಷೆಗಳನ್ನು ಮುಂದೂಡಲು ಹೆಚ್ಚುತ್ತಿರುವ ಧ್ವನಿಗಳ ಮಧ್ಯೆ, ಸರ್ಕಾರಿ ಪ್ರಸಾರಕವಾದ ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ನಿಶಾಂಕ್, "ಪೋಷಕರು ಮತ್ತು ವಿದ್ಯಾರ್ಥಿಗಳಿಂದ ನಿರಂತರ ಒತ್ತಡದ ನಂತರ ಪರೀಕ್ಷೆಗಳನ್ನು ನಡೆಸಲು ಕೇಂದ್ರ ನಿರ್ಧರಿಸಿದೆ. ಜೆಇಇ ಬರೆಯಲು ಹೊರಟಿರುವ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ್ದಾರೆ" ಎಂದು ಹೇಳಿದರು.

Will go ahead with JEE, NEET exams as students, parenst wanted it: Education Minister
ವಿದ್ಯಾರ್ಥಿಗಳ, ಪೋಷಕರ ಇಚ್ಛೆಯಂತೆ ಜೆಇಇ, ನೀಟ್ ಪರೀಕ್ಷೆಗಳು ನಡೆಯಲಿವೆ: ಶಿಕ್ಷಣ ಸಚಿವ

ಹೈದರಾಬಾದ್: ಜಂಟಿ ಪ್ರವೇಶ ಪರೀಕ್ಷೆ ಮತ್ತು ರಾಷ್ಟ್ರೀಯ ಅರ್ಹತೆ - ಪ್ರವೇಶ ಪರೀಕ್ಷೆ(ನೀಟ್-ಯುಜಿ) ಅನ್ನು ಸೆಪ್ಟೆಂಬರ್‌ನಲ್ಲಿ ನಿಗದಿತ ರೀತಿಯಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ ನಂತರ, ಹೆಚ್ಚು ಚರ್ಚಾಸ್ಪದ ವಿಷಯದ ಕುರಿತು ಮಾತನಾಡಿದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬುಧವಾರ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಆದೇಶವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡರು.

ಕೋವಿಡ್​ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ನಿರ್ಣಾಯಕ ಪರೀಕ್ಷೆಗಳನ್ನು ಮುಂದೂಡಲು ಹೆಚ್ಚುತ್ತಿರುವ ಧ್ವನಿಗಳ ಮಧ್ಯೆ, ಸರ್ಕಾರಿ ಪ್ರಸಾರಕವಾದ ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ನಿಶಾಂಕ್, "ಪೋಷಕರು ಮತ್ತು ವಿದ್ಯಾರ್ಥಿಗಳಿಂದ ನಿರಂತರ ಒತ್ತಡದ ನಂತರ ಪರೀಕ್ಷೆಗಳನ್ನು ನಡೆಸಲು ಕೇಂದ್ರ ನಿರ್ಧರಿಸಿದೆ. ಜೆಇಇ ಬರೆಯಲು ಹೊರಟಿರುವ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ್ದಾರೆ" ಎಂದು ಹೇಳಿದರು.

"ನಾವು ವಿದ್ಯಾರ್ಥಿಗಳೊಂದಿಗೆ ಇದ್ದೇವೆ. ಅವರ ಸುರಕ್ಷತೆ ಮೊದಲು ಬರುತ್ತದೆ, ನಂತರ ಅವರ ಶಿಕ್ಷಣ". ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆ ರೋಗದ ಮಧ್ಯೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ನಿಶಾಂಕ್ ಹೇಳಿದರು.

ಜಂಟಿ ಪ್ರವೇಶ ಪರೀಕ್ಷೆ ಸೆಪ್ಟೆಂಬರ್ 1-6 ರ ವರೆಗೆ ನಿಗದಿಯಾಗಿದ್ದರೆ, ಸೆಪ್ಟೆಂಬರ್ 13 ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ) ಯೋಜಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 570 ರಿಂದ 660ಕ್ಕೆ (ಜೆಇಇ ಗೆ) ಮತ್ತು 2,546 ರಿಂದ 3843 ಕ್ಕೆ (ನೀಟ್‌ಗೆ) ಹೆಚ್ಚಿಸಲಾಗಿದೆ. ಜೆಇಇ-ಮೇನ್ಸ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದರೆ, ನೀಟ್ ಪೆನ್ - ಪೇಪರ್ ಪರೀಕ್ಷೆಯಾಗಿದೆ ಎಂದು ಎನ್‌ಟಿಎ ತಿಳಿಸಿದೆ ಹೇಳಿಕೆಯಲ್ಲಿ.

ಜೆಇಇ-ಮೇನ್ಸ್‌ಗಾಗಿ ಒಟ್ಟು 9.53 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರೆ, 15.97 ಲಕ್ಷ ವಿದ್ಯಾರ್ಥಿಗಳು ನೀಟ್‌ಗೆ ನೋಂದಾಯಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.