ಅಹಮದಾಬಾದ್ : ಯುವತಿಯನ್ನು ಅಪಹರಿಸಿ ಆಕೆಯ ಗುಪ್ತಾಂಗಗಳಿಗೆ ಪ್ರಿಯಕರನ ಪತ್ನಿಯೊಬ್ಬಳು ಖಾರದ ಪುಡಿ ಎರಚಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ.
ಗಿರೀಶ್ ಗೋಸ್ವಾಮಿ ಎಂಬುವವರ ಗಾರ್ಮೆಂಟ್ ಶಾಪ್ನಲ್ಲಿ 22 ವರ್ಷದ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಲವ್ ಆಗಿತ್ತು. ಇವರ ನಡುವೆ ದೈಹಿಕ ಸಂಬಂಧವೂ ಇತ್ತು ಎನ್ನಲಾಗ್ತಿದೆ. ಈ ಆರೋಪದಿಂದ ಬೇಸತ್ತ ಯುವತಿ ಆ ಶಾಪ್ನಲ್ಲಿ ಕೆಲಸ ಬಿಟ್ಟು ಬೇರೊಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಅವರಿಬ್ಬರ ನಡುವಿನ ಸಂಬಂಧಕ್ಕೆ ತಾತ್ಕಾಲಿಕ ತಡೆಯೂ ಬಿದ್ದಿತ್ತಂತೆ.
ಆದರೆ, 2 ತಿಂಗಳ ಹಿಂದೆ ಮತ್ತೆ ಫೋನ್ ಮಾಡಿದ್ದ ಗಿರೀಶ್ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದ. ಅದಾದ ನಂತರ ಇಬ್ಬರೂ ಸುತ್ತಾಡಲು ಆರಂಭಿಸಿದ್ದರು. ಈ ವಿಷಯ ಗಿರೀಶ್ನ ಪತ್ನಿಗೆ ಗೊತ್ತಾಗಿದೆ, ಆತನ ಮನೆಯಲ್ಲಿ ದೊಡ್ಡ ಗಲಾಟೆಯೂ ನಡೆದಿದೆ. ತನ್ನ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿರುವ ಯುವತಿಯ ಮೇಲೆ ಕೋಪಗೊಂಡಿದ್ದ ಜಾನು ಗೋಸ್ವಾಮಿ ಆಕೆಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದಳು.
ಗುರುವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಆ ಯುವತಿಯನ್ನು ರಸ್ತೆಯಲ್ಲಿ ಅಡ್ಡಹಾಕಿದ ಜಾನು ಗೋಸ್ವಾಮಿ ಆಕೆಯನ್ನು ಅಪಹರಿಸಿ, ಮನೆಯೊಂದಕ್ಕೆ ಕರೆದೊಯ್ದಳು. ಆಕೆಗೆ ಇನ್ನಿಬ್ಬರು ಮಹಿಳೆಯರು ಸಹಾಯ ಮಾಡಿದ್ದರು. ಮೂವರು ಮಹಿಳೆಯರು ಸೇರಿಕೊಂಡು ಆ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಗುಪ್ತಾಂಗದೊಳಗೆ ಖಾರದ ಪುಡಿ ಹಾಕಿದ್ದರು. ನಂತರ ಆಕೆಯ ಮೇಲೆ ಆ್ಯಸಿಡ್ ಎರಚಿ ಸಾಯಿಸುವ ಬೆದರಿಕೆಯನ್ನೂ ಹಾಕಿದ್ದರು ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆ ಮೂವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.