ಕೋಲ್ಕತ್ತಾ: ಮೃತ ಮಗನ ವೀರ್ಯಾಣು ಪಡೆಯುವ ತಂದೆಯ ಮನವಿಯನ್ನು ತಿರಸ್ಕರಿಸಿರುವ ಕಲ್ಕತ್ತಾ ಹೈಕೋರ್ಟ್, ಈ ಹಕ್ಕು ಪತ್ನಿಗೆ ಮಾತ್ರ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.
ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತ ವ್ಯಕ್ತಿಯೋರ್ವನ ವೀರ್ಯಾಣುವನ್ನು ಸಂಗ್ರಹಿಸಿಡಲಾಗಿತ್ತು. ವೀರ್ಯಾಣುವನ್ನು ತಮಗೆ ಹಸ್ತಾಂತರಿಸುವಂತೆ ಆಸ್ಪತ್ರೆ ಅಧಿಕಾರಿಗಳ ಬಳಿ ಮೃತ ವ್ಯಕ್ತಿಯ ತಂದೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಮದುವೆ ಸಾಕ್ಷ್ಯಾಧಾರಗಳು ಹಾಗೂ ಮೃತ ವ್ಯಕ್ತಿ ಪತ್ನಿಯ ಅನುಮತಿಬೇಕೆಂದು ಆಸ್ಪತ್ರೆ ತಿಳಿಸಿತ್ತು.
ಇದನ್ನೂ ಓದಿ: ಮಗನ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್
ಹೀಗಾಗಿ ತನ್ನ ಕುಟುಂಬದ ಸಂತತಿಗಾಗಿ ನನ್ನ ಮಗನ ವೀರ್ಯಾಣು ಕೊಡಿಸುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್ಗೆ ತಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಭಟ್ಟಾಚಾರ್ಯ, ಪತ್ನಿಯು ಬದುಕಿರುವಾಗಲೇ ಆಕೆಯನ್ನು ಬಿಟ್ಟು ಬೇರಾರಿಗೂ ವೀರ್ಯಾಣು ಹಸ್ತಾಂತರ ಮಾಡಲಾಗದು. ಅರ್ಜಿದಾರನಿಗೆ ಇದನ್ನು ಕೇಳುವ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ಹೇಳಿ, ಅರ್ಜಿಯನ್ನು ವಜಾ ಮಾಡಿದೆ.