ರಂಗಾರೆಡ್ಡಿ(ತೆಲಂಗಾಣ): ಬೇರೆ ಪುರುಷರೊಂದಿಗೆ ಸಲುಗೆಯಿಂದ ಇರುತ್ತಿದ್ದ ಮಹಿಳೆಯನ್ನು ಗಂಡನೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಜಲ್ಪಲ್ಲಿ ಪುರಸಭೆ ವ್ಯಾಪ್ತಿಯ ಶ್ರೀರಾಮ ನಗರದಲ್ಲಿ ನಡೆದಿದೆ.
ವಿವಾಹಿತಳ ಮೇಲೆ ಲವ್
ಆಂಧ್ರಪ್ರದೇಶದ ಕರ್ನೂಲ್ ನಿವಾಸಿ ನಾಗರಾಜು ಮೂರು ವರ್ಷಗಳಿಂದ ರಂಗಾರೆಡ್ಡಿ ಜಿಲ್ಲೆ ಜಲ್ಪಲ್ಲಿ ಪುರಸಭೆ ವ್ಯಾಪ್ತಿಯ ಶ್ರೀರಾಮ ನಗರದಲ್ಲಿ ವಾಸಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ನಾಗರಾಜು ಸ್ಥಳೀಯ ನಿವಾಸಿಯಾದ ವರಲಕ್ಷ್ಮಿ (30) ಜೊತೆ ಪರಿಚಯವಾಗಿದೆ. ವರಲಕ್ಷ್ಮಿ ಇಲ್ಲಿನ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಗಲೇ ಅವಳಿಗೆ ಗಂಡ ಮತ್ತು ಮಗ ಇದ್ದನು. ನಾಗರಾಜು ಮತ್ತು ವರಲಕ್ಷ್ಮಿ ಮಧ್ಯೆ ಪರಿಚಯ ಪ್ರೇಮವಾಗಿ ಬದಲಾಗಿದೆ.
ಮಗು, ಗಂಡನಿದ್ರೂ ಮದುವೆ
ಎರಡು ವರ್ಷಗಳ ಹಿಂದೆ ನಾಗರಾಜು ಜೊತೆ ಗಂಡನನ್ನು ಬಿಟ್ಟ ವರಲಕ್ಷ್ಮಿ ಸಪ್ತಪದಿ ತುಳಿದಿದ್ದಳು. ಮದುವೆಯಾದ ಹೊಸತರಲ್ಲಿ ಇವರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಬಳಿಕ ವರಲಕ್ಷ್ಮಿ ಬೇರೆ ಪುರುಷರೊಂದಿಗೆ ಸನ್ನಿಹಿತವಾಗಿರಲು ಶುರು ಮಾಡಿಕೊಂಡಿದ್ದಾಳೆ.
ಬೆಳ್ಳಂಬೆಳಗ್ಗೆ ಹೆಂಡ್ತಿ ಮಟಾಷ್!
ಬೇರೆ ಪುರುಷರೊಂದಿಗೆ ಸಲುಗೆಯಿಂದ ಇರುವುದನ್ನು ಗಮನಿಸಿದ ನಾಗರಾಜು ಹೆಂಡ್ತಿ ವರಲಕ್ಷ್ಮಿ ಜೊತೆ ಜಗಳವಾಡಿದ್ದಾನೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಲೇ ಇದ್ದವು. ಮಂಗಳವಾರ ಬೆಳ್ಳಂಬೆಳಗ್ಗೆ ಇಬ್ಬರ ಜಗಳ ತಾರಕಕ್ಕೇರಿದೆ. ಈ ವೇಳೆ, ನಾಗರಾಜು ಚಾಕುವಿನಿಂದ ಹೆಂಡ್ತಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಪೊಲೀಸ್ ಹೇಳಿದ್ದೇನು?
ತನ್ನ ಹೆಂಡ್ತಿ ವರಲಕ್ಷ್ಮಿಯನ್ನು ಕೊಲೆ ಮಾಡಿ ಆರೋಪಿ ನಾಗರಾಜು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ವರಲಕ್ಷ್ಮಿಗೆ ನಾಗರಾಜು 9ನೇ ಗಂಡನಾಗಿದ್ದಾನೆ. ಹೀಗೆ ವರಲಕ್ಷ್ಮಿಇನ್ನೊಬ್ಬ ಪುರುಷನೊಂದಿಗೆ ಸಲುಗೆ ಬೆಳಸಿಕೊಳ್ಳುವುದು, ಬಳಿಕ ಅವರನ್ನು ಮದುವೆ ಮಾಡಿಕೊಳ್ಳುವುದು, ತದನಂತರ ಜಗಳವಾಡಿ ಅವರನ್ನು ಬಿಟ್ಟು ಮತ್ತೊಂದು ಮದುವೆ ಮಾಡಿಕೊಳ್ಳುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.