ಪೂರ್ವ ಗೋಧಾವರಿ(ಆಂಧ್ರಪ್ರದೇಶ) : ಪ್ರಿಯಕರನ ಸಹಾಯದಿಂದ ಹೆಂಡತಿಯೇ ಗಂಡನನ್ನು ಕೊಲೆ ಮಾಡಿ, ಹೃದಯಾಘಾತ ಎಂದು ನಂಬಿಸಿದ ಘಟನೆ ಪೂರ್ವ ಗೋಧಾವರಿ ಜಿಲ್ಲೆಯ ಸಕಿನೆಟಿಪಲ್ಲಿಯಲ್ಲಿ ನಡೆದಿದೆ.
ಜುಲೈ 2ರಂದು ಪ್ರಸಾದ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದರು. ಪ್ರತಿಯೊಬ್ಬರು ಹೃದಯಾಘಾತದಿಂದಲೇ ಸಾವಿಗೀಡಾಗಿದ್ದಾನೆ ಎಂದು ನಂಬಿದ್ದರು. ಆದರೆ, ಮೃತನ ಮಗಳು ಮೇರಿ ಜೆಸ್ಲಿ ತನ್ನ ತಾಯಿ ಮತ್ತು ಆಕೆಯ ಗೆಳೆಯನ ಮೇಲೆ ಕೊಲೆ ಆರೋಪ ಹೊರಿಸಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಇದು ಸ್ವಾಭಾವಿಕ ಸಾವಲ್ಲ ಎಂದು ತಿಳಿದು ಬಂದಿದೆ.
ಶಿವ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮೃತನ ಪತ್ನಿ ಮೇರಿ ಪ್ರಶಾಂತಿ, ಗಂಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೇರಿ ಪ್ರಶಾಂತಿಯ ದೂರವಾಣಿ ಕರೆ ಮತ್ತು ಮೆಸೇಜ್ಗಳನ್ನ ಗಮನಿಸಿದ ನಂತರ ಪೊಲೀಸರಿಗೆ ಕೊಲೆ ಬಗ್ಗೆ ದೂರು ನೀಡಲಾಗಿದೆ.
ಸದ್ಯ ಪೊಲೀಸರು ಮೃತದೇಹವನ್ನು ಹೊರ ತೆಗೆದು ಮತ್ತೊಮ್ಮೆ ಶವ ಪರೀಕ್ಷೆ ನಡೆಸಿವೆ. ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.