ಪಾಟ್ನಾ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಿಹಾರಕ್ಕೆ ಮರಳಿದ ಎಲ್ಲರಿಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇದರ ಜೊತೆಗೆ ಕಾರ್ಮಿಕರನ್ನು 'ವಲಸಿಗರು' ಎಂದು ಸಂಬೋಧಿಸುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.
ಒಂದು ರಾಜ್ಯದಿಂದ ಇನ್ನೊಂದಕ್ಕೆ ಹೋಗುವ ಜನರನ್ನು 'ವಲಸೆಗಾರ' ಎಂದು ಕರೆಯುವುದೇಕೆ?. ನಮ್ಮದು ಒಂದು ದೇಶ, ಒಂದು ರಾಷ್ಟ್ರೀಯತೆ. ಇಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ವ್ಯಕ್ತಿ ವಲಸಿಗನಲ್ಲ. ಆತ ಹೊರದೇಶಕ್ಕೆ ಹೋದರೆ ಮಾತ್ರ ವಲಸಿಗನಾಗುತ್ತಾನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇತರ ರಾಜ್ಯಗಳಿಂದ ಮರಳಿದ ಜನರಿಗೆ ಉದ್ಯೋಗ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕೆಲಸ ಮಾಡುತ್ತಿವೆ. ಕಾರ್ಮಿಕರ ಸಂಚಾರಕ್ಕೆ ಕೇಂದ್ರವು ಅವಕಾಶ ನೀಡಿದ ನಂತರ ವಿದ್ಯಾರ್ಥಿಗಳು, ಕಾರ್ಮಿಕರು ಬಸ್, ರೈಲುಗಳ ಮೂಲಕ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.