ETV Bharat / bharat

ವಿಶೇಷ ಲೇಖನ ...ಕೋವಿಡ್-‌19ಗೆ ಲಸಿಕೆ ಕಂಡು ಹಿಡಿಯಲು ಬೇಕಾಗುವ ಸಮಯ ಎಷ್ಟು ಗೊತ್ತೇ...? - ಕೋವಿಡ್-‌19 ಸೋಂಕುರೋಗ

ಕೋವಿಡ್-‌19 ರೋಗಕ್ಕೆ ಲಸಿಕೆ ಸಿದ್ಧಪಡಿಸಲು ಒಂದೂವರೆ ವರ್ಷಗಳು ಬೇಕಾಗುತ್ತವೆ. ಆದರೆ, ಇದು ಅಂತಹ ದೀರ್ಘ ಕಾಲವೇನಲ್ಲ. ಹತ್ತು ವರ್ಷ ಹಿಡಿಯಬಹುದಾಗಿದ್ದ ಅವಧಿ ಪರಸ್ಪರ ಉನ್ನತ ಸಹಕಾರ ಹಾಗೂ ಉತ್ತಮ ತಂತ್ರಜ್ಞಾನದಿಂದಾಗಿ ಈಗ ಕೇವಲ ಒಂದು ವರ್ಷಕ್ಕೆ ಇಳಿದಿದೆ.

Why a coronavirus vaccine takes over a year?
ಕೋವಿಡ್-‌19ಗೆ ಲಸಿಕೆ
author img

By

Published : Apr 12, 2020, 11:26 AM IST

Updated : Apr 12, 2020, 2:58 PM IST

ನವದೆಹಲಿ: ಕೋವಿಡ್-‌19 ಸೋಂಕು ಇಡೀ ಜಗತ್ತನ್ನು ಆವರಿಸಿಕೊಂಡು ಎಲ್ಲೆಡೆ ತಲ್ಲಣ ಹುಟ್ಟಿಸುತ್ತಿರುವಾಗ, ಇದಕ್ಕೆ ಪರಿಣಾಮಕಾರಿ ಲಸಿಕೆಯೊಂದನ್ನು ಕಂಡುಹಿಡಿಯಲು ಅಂತಾರಾಷ್ಟ್ರೀಯ ಸಮುದಾಯ ಇನ್ನಿಲ್ಲದಂತೆ ಪ್ರಯತ್ನಗಳನ್ನು ನಡೆಸಿದೆ. ಇದರಿಂದಾಗಿ ಇನ್ನು 12ರಿಂದ 18 ತಿಂಗಳುಗಳ ಅವಧಿಯಲ್ಲಿ ಸೂಕ್ತ ಲಸಿಕೆ ಸಿದ್ಧವಾಗಲಿದೆ ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ ಲಸಿಕೆಯೊಂದನ್ನು ಸಿದ್ಧಪಡಿಸಲು ಬೇಕಾದ ಅವಧಿ ಒಂದು ವರ್ಷ ಎಂದರೆ ಇದು ಸುದೀರ್ಘ ಕಾಲ ಎಂದು ಅನಿಸಬಹುದು. ವಾಸ್ತವವಾಗಿ ಇದು ಅಷ್ಟೊಂದು ಸುದೀರ್ಘವೇನಲ್ಲ. ಏಕೆಂದರೆ, ಲಸಿಕೆ ತಯಾರಿಕೆ ಎಂಬುದು ಅತ್ಯಂತ ಸಂಕೀರ್ಣ ಪ್ರಕ್ರಿಯೆ. ಅದಕ್ಕೆ ಸಾಕಷ್ಟು ದೀರ್ಘಕಾಲ ತಗಲುತ್ತದೆ. ಆದರೆ, ತಂತ್ರಜ್ಞಾನದ ದಾಂಗುಡಿ ಹಾಗೂ ಪರಸ್ಪರ ಸಹಕಾರದಿಂದಾಗಿ, ನೂತನ ಲಸಿಕೆಯೊಂದರ ಅಭಿವೃದ್ಧಿಗೆ ಹಲವಾರು ವರ್ಷಗಳ ಬದಲು ಕೆಲವೇ ತಿಂಗಳು ಸಾಕಾಗಲಿವೆ.

ಉದ್ದೇಶಿತ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳನ್ನು ಗುರುತಿಸಲು, ಅದರ ವಿರುದ್ಧ ಹೋರಾಡಲು ಹಾಗೂ ಅದನ್ನು ನಿರ್ಮೂಲನೆ ಮಾಡಲು ಮನುಷ್ಯ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸಿದ್ಧಪಡಿಸುವ ಪರಿಕಲ್ಪನೆಯ ಆಧಾರದ ಮೇಲೆ ಲಸಿಕೆಗಳು ಕೆಲಸ ಮಾಡುತ್ತವೆ. ಇದಕ್ಕಾಗಿ ಲಸಿಕೆಗಳು ವೈರಸ್‌ ಕುರಿತ ಸಣ್ಣ ಪ್ರಮಾಣದ ಮಾಹಿತಿಯನ್ನು ಬಿಡುಗಡೆ ಮಾಡುತ್ತವೆ. ಆಗ ದೇಹವು ಇದಕ್ಕೆ ಪ್ರತಿಯಾಗಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಗರಿಷ್ಠ ಪ್ರಮಾಣದಲ್ಲಿ ಬೆಳೆಸಿಕೊಳ್ಳುತ್ತದೆ.

ಸಾಂಪ್ರದಾಯಿಕ ಲಸಿಕೆ ವಿಧಾನಗಳಲ್ಲಿ ವೈರಸ್‌ಗಳನ್ನು ಮೊಟ್ಟೆಗಳು ಅಥವಾ ಜೀವಕೋಶಗಳಲ್ಲಿ ಬೆಳೆಸಲಾಗುತ್ತದೆ. ಇದು ಸಾಕಷ್ಟು ಸಮಯ ಹಿಡಿಯುವ ಪ್ರಕ್ರಿಯೆ. ಆಧುನಿಕ ಡಿಎನ್‌ಎ ಮತ್ತು ಆರ್‌ಎನ್‌ಎ ಆಧರಿತ ಲಸಿಕೆಗಳ ತಯಾರಿಕಾ ವಿಧಾನಗಳು ವೇಗವಾಗಿದ್ದು ಅವನ್ನು ಪ್ರಯೋಗಾಲಯಗಳಲ್ಲಿ ಉತ್ಪಾದಿಸಬಹುದಾಗಿದೆ. ಅದಾಗ್ಯೂ, ವಿವಿಧ ಕಂಪನಿಗಳನ್ನು ಲಸಿಕೆ ಉತ್ಪಾದಿಸಲು ಉತ್ತೇಜಿಸುವುದು ಉತ್ತಮ. ಏಕೆಂದರೆ, ಪ್ರತಿಯೊಂದರ ವಿಧಾನವೂ ಬೇರೆಬೇರೆಯಾಗಿದ್ದು, ಕನಿಷ್ಠ ಯಾವುದಾದರೂ ಒಂದು ಲಸಿಕೆ ಅಂತಿಮವಾಗಿ ಕೆಲಸ ಮಾಡಲು ಸಾಧ್ಯವಾಗುವ ಸಂಭವನೀಯತೆ ಹೆಚ್ಚು.

ಲಸಿಕೆ ಸಿದ್ಧವಾದರೂ, ಅದು ಮಾರುಕಟ್ಟೆಗೆ ಬರುವ ಮುನ್ನ ಸಾಕಷ್ಟು ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಒಂದು ವೇಳೆ ಅದು ಪರೀಕ್ಷೆಗಳಿಗೆ ಸರಿಯಾಗಿ ಒಳಪಡದೇ ಹೋದರೆ, ಲಸಿಕೆಗಳು ಆರೋಗ್ಯವಂತ ಮನುಷ್ಯರಿಗೂ ಸಮಸ್ಯೆ ತರಬಲ್ಲವು. ಏಕೆಂದರೆ, ಅವನ್ನು ಮೊದಲು ಪ್ರಯೋಗಿಸುವುದೇ ಆರೋಗ್ಯವಂತರ ಮೇಲೆ. ಅವರಿಗೆ ರೋಗ ತಗಲಬಾರದು ಎಂಬ ಮುನ್ನೆಚ್ಚರಿಕೆಯೇ ಇದಕ್ಕೆ ಕಾರಣ.

ಈ ಪರೀಕ್ಷೆ ಪ್ರಕ್ರಿಯೆ ವರ್ಷಗಟ್ಟಲೇ ನಡೆಯುವಂಥದಾಗಿದ್ದು, ಲಸಿಕೆಯು ಸುರಕ್ಷಿತವಷ್ಟೇ ಅಲ್ಲ ಪರಿಣಾಮಕಾರಿಯೂ ಹೌದು ಎಂಬುದನ್ನು ದೃಢಪಡಿಸಿಕೊಳ್ಳಬೇಕಾಗುತ್ತದೆ. ಈಗ ಜಗತ್ತಿನಾದ್ಯಂತ ವಿವಿಧ ದೇಶಗಳು ಒಟ್ಟೊಟ್ಟಿಗೇ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿವೆ. ಒಮ್ಮೆ ಈ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಾಗ, ಈ ಪ್ರಕ್ರಿಯೆಯು ಮಹತ್ವದ ಅಂತಿಮ ಹಂತವಾದ ಉತ್ಪಾದನೆಯವರೆಗೂ ಮುಂದುವರಿಯುತ್ತದೆ. ಅಂಗೀಕೃತವಾದ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಹಾಗೂ ವೇಗವಾಗಿ ಉತ್ಪಾದಿಸುವ ಮೂಲಕ ಜನರ ಜೀವ ರಕ್ಷಣೆ ಮಾಡುವುದು ಅತ್ಯಂತ ಪ್ರಮುಖ ಘಟ್ಟ.

ಲಸಿಕೆ ಉತ್ಪಾದನೆಯನ್ನು ಪ್ರಯೋಗಗಳ ಜೊತೆಜೊತೆಗೂ ಮಾಡಬಹುದು ಎಂದು ಅನೇಕರು ಭಾವಿಸುತ್ತಾರೆ. ಇದರಿಂದ ಅಂಗೀಕಾರ ದೊರೆಯುತ್ತಲೇ ಅದು ಮಾರುಕಟ್ಟೆಗೆ ಬರಬಹುದು ಎಂಬುದು ಅವರ ಯೋಚನೆ. ಆದರೆ, ಇದು ಕಾರ್ಯಸಾಧುವಲ್ಲ. ಏಕೆಂದರೆ, ಒಂದು ವೇಳೆ ಲಸಿಕೆಯು ಪರೀಕ್ಷಾರ್ಥ ಪ್ರಯೋಗಗಳಲ್ಲಿ ಯಶಸ್ವಿಯಾಗದಿದ್ದರೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತದೆ.

ದೊಡ್ಡ ಪ್ರಮಾಣದ ಉತ್ಪಾದನೆ ಹಾಗೂ ನಷ್ಟವುಂಟಾಗುವ ಸಾಧ್ಯತೆಗಳನ್ನು ನಿವಾರಿಸುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಜೊತೆಗೂಡಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಸಾಂಕ್ರಾಮಿಕ ಸಿದ್ಧತಾ ನವೋನ್ವೇಷಣೆಗಳ ಒಕ್ಕೂಟ (ಕೊಯಾಲಿಶನ್‌ ಫಾರ್‌ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್‌ ಇನೋವೇಶನ್ಸ್‌ ಸಿಇಪಿಐ) ಸಂಘಟನೆಯು ಲಸಿಕೆಗಳನ್ನು ಅಭಿವೃದ್ಧಿಪಡಿಸಲು $200 ಕೋಟಿ ಡಾಲರ್‌ಗಳ ಅನುದಾನ ಮತ್ತು ಬೆಂಬಲಕ್ಕಾಗಿ ಪ್ರಯತ್ನಿಸುತ್ತಿದೆ.

ಲಸಿಕೆಗಳು ಅತ್ಯಂತ ಮಹತ್ವದ ಅವಶ್ಯಕತೆಗಳಾಗಿದ್ದು, ಅವು ಜೀವ ಉಳಿಸುವ ಸಾಧನಗಳಾಗಿವೆ. ಅಷ್ಟೇ ಅಲ್ಲ, ಸಾಮಾಜಿಕ ವ್ಯವಸ್ಥೆಯು ಸಾಧ್ಯವಾದಷ್ಟೂ ಬೇಗ ಮತ್ತೆ ಎಂದಿನಂತೆ ಕೆಲಸ ಮಾಡಲು ಅವು ನೆರವಾಗುತ್ತವೆ.

Last Updated : Apr 12, 2020, 2:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.