ನವದೆಹಲಿ: ಭಯೋತ್ಪಾದನೆ ಬೆಂಬಲಿಸುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಅದರ ಯಾವುದೇ ನಿರಾಕರಣೆ ಈ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಭಾರತ ಗುರುವಾರ ಹೇಳಿದೆ.
ಇಂಡೋ- ಅಮೆರಿಕ 2+2 ಸಂವಾದ ಬಳಿಕ ಹೇಳಿಕೆ ನೀಡಿದ ಭಾರತ, ವಿಶ್ವಸಂಸ್ಥೆ ನಿಷೇಧನ ಹೇರಿರುವ ಬಹುತೇಕ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶವು ಬಲಿಪಶು ಕಾರ್ಡ್ ಆಟ ಆಡಲು ಪ್ರಯತ್ನಿಸಬಾರದು. ಭಯೋತ್ಪಾದನೆ ಬೆಂಬಲಿಸುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಇಡೀ ಜಗತ್ತಿಗೆ ಸತ್ಯ ತಿಳಿದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಧ್ಯಮಗೋಷ್ಠಿಯಲ್ಲಿ ಕುಟುಕಿದ್ದಾರೆ.
ಪಾಕ್ ನಾಯಕರು ಸಹ ಭಯೋತ್ಪಾದನೆಗೆ ಸಂಬಂಧಿಸಿದಂತೆ ತಮ್ಮ ಪಾತ್ರದ ಬಗ್ಗೆ ಸಮಯ ಬಂದಿದೆ ಹೀಗಾಗಿ ಈಗ ಮತ್ತೆ ಮಾತನಾಡಿದ್ದಾರೆ. ಭಾರತ ಮತ್ತು ಯುಎಸ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎಲ್ಲ ರೀತಿಯಲ್ಲೂ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ತಕ್ಷಣವೇ ತನ್ನ ನಿಯಂತ್ರಣದಲ್ಲಿರುವ ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಭಾರತ ಮತ್ತು ಯುಎಸ್ ನಡುವಿನ 2- 2 ಸಂಚಿವರ ಮಟ್ಟದ ಸಂವಾದದ ನಂತರ ಹೊರಡಿಸಿದ ಜಂಟಿ ಹೇಳಿಕೆಯನ್ನು ಪಾಕಿಸ್ತಾನ ತಿರಸ್ಕರಿಸುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಪ್ರತಿಕ್ರಿಯಿಸಿದೆ.