ETV Bharat / bharat

ಲಾಕ್​ಡೌನ್​ ವೇಳೆ ಬಡವರಿಗೆ ಭಾರತ ಸರ್ಕಾರದ ಕ್ರಮಗಳು ಶ್ಲಾಘನೀಯ: ವಿಶ್ವ ಆರೋಗ್ಯ ಸಂಸ್ಥೆ - ವಿಶ್ವ ಆರೋಗ್ಯ ಸಂಸ್ಥೆ

ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿದ್ದು, ಈಗಾಗಲೇ ಪ್ರಧಾನಿ ಮೋದಿ 1.7 ಲಕ್ಷ ಕೋಟಿ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

WHO Praised pm modi
WHO Praised pm modi
author img

By

Published : Apr 2, 2020, 2:06 PM IST

ನವದೆಹಲಿ: ಲಾಕ್​ಡೌನ್​ ಆದೇಶದಿಂದ ದೇಶದ ಬಡಜನರಿಗೆ ತೊಂದರೆಯಾಗಿದೆ ನಿಜ. ಆದ್ರೆ, ಭವಿಷ್ಯದಲ್ಲಿ ಸಂಭವಿಸುವ ಬಹುದೊಡ್ಡ ಗಂಡಾಂತರ ತಪ್ಪಿಸಲು ಈ ಕ್ರಮ ದೇಶಕ್ಕೆ ಅನಿವಾರ್ಯವಾಗಿತ್ತು. ಇಂಥ ಸಂದರ್ಭದಲ್ಲಿ ದೇಶದ ಬಡಜನತೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸೌಲಭ್ಯಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಜನಸಾಮಾನ್ಯರಿಗೆ ರೇಷನ್​, ಹಣ, ಆಹಾರ ಸೇರಿದಂತೆ ಮೂಲಭೂತ ಸೌಲಭ್ಯ ಸಿಗುವಂತೆ ಮಾಡುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪ್ರಧಾನ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸುಸ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಡಬ್ಲ್ಯೂಎಚ್​​ಒ ನಿರ್ದೇಶಕರ ಟ್ವೀಟ್​ ನಲ್ಲೇನಿದೆ?

ಕೋವಿಡ್​​-19 ಹೊಡೆದೋಡಿಸಲು ಮನೆಯಲ್ಲೇ ಇರಿ ಎಂದು ಎಲ್ಲ ದೇಶಗಳೂ ಹೇಳುತ್ತಿವೆ. ಈ ಹಂತದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯ ಆಹಾರ ಮತ್ತು ಜೀವನ ಮೂಲಭೂತ ಸೌಲಭ್ಯ ಒದಗಿಸುವಂತೆ ನಾನು ಎಲ್ಲ ದೇಶಗಳಿಗೆ ಕರೆ ನೀಡುತ್ತೇನೆ ಎಂದಿದ್ದಾರೆ.

  • My appreciation to Prime Minister @narendramodi for announcing a $24 billion package to support 🇮🇳's vulnerable populations during #COVID19 crisis, including:
    -free food rations for 800M disadvantaged people
    -cash transfers to 204M poor women
    -free cooking gas for 80M households.

    — Tedros Adhanom Ghebreyesus (@DrTedros) April 2, 2020 " class="align-text-top noRightClick twitterSection" data=" ">
  • Countries are asking ppl to #stayhome & shutting down population movement to limit #COVID19 transmission. These steps can have unintended consequences for the poorest & most vulnerable. I call on countries to ensure these populations have food & life essentials during the crisis.

ಇದೇ ವೇಳೆ, ಪ್ರಧಾನಿ ಮೋದಿ ಅವರು ಜನಸಾಮಾನ್ಯರ ಅಗತ್ಯಕ್ಕಾಗಿ 1.7 ಲಕ್ಷ ಕೋಟಿ ರೂ ಪರಿಹಾರಾತ್ಮಕ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಅವರ ನಿರ್ಧಾರ ಮೆಚ್ಚುವಂತಹದ್ದು ಎಂದಿದ್ದಾರೆ. 800 ಮಿಲಿಯರ್​ ಜನರಿಗೆ ಉಚಿತ ಪಡಿತರ, 204 ಮಿಲಿಯನ್​ ಮಹಿಳೆಯರಿಗೆ ಹಣ ಹಾಗೂ 80 ಮಿಲಿಯನ್​ ಜನರಿಗೆ ಉಚಿತ ಅಡುಗೆ ಅನಿಲ ನೀಡುವ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.