ಹೈದರಾಬಾದ್: ತಬ್ಲೀಘಿ ಜಮಾಅತ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಾಗಿನಿಂದ, ಅಮೀರ್ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಆದರೆ ಇಲ್ಲಿವರೆಗೆ ತನ್ನ ವಕೀಲ ಯಾರು ಎಂದು ಕಂಧಲ್ವಿ ಬಹಿರಂಗಪಡಿಸದಿದ್ದರೂ, ಹಲವು ವಕೀಲರು ತಾವು ಮೌಲಾನಾ ಸಾದ್ನ ಕಾನೂನು ಪ್ರತಿನಿಧಿ ಎಂದು ಹೇಳಿಕೊಂಡಿದ್ದಾರೆ. ಮೌಲಾನಾ ಸಾದ್ನ ನಿಜವಾದ ವಕೀಲ ಯಾರು ಎಂಬುವುದು ಪ್ರಶ್ನೆಯಾಗಿದೆ.
ಮೌಲಾನಾ ಸಾದ್ ಕಂಧಲ್ವಿಯ ನಿಜವಾದ ವಕೀಲ ಯಾರು?
ತಬ್ಲೀಘಿ ಜಮಾಅತ್ ಸಭೆ ಮೂಲಕ ದೇಶಾದ್ಯಂತ ಕೊರೊನಾ ವೈರಸ್ ಹರಡಿದ ಆರೋಪದ ಮೇಲೆ ದೆಹಲಿ ಪೊಲೀಸರು ತಬ್ಲೀಘಿ ಜಮಾಅತ್ ನಾಯಕ ಮೊಹಮ್ಮದ್ ಸಾದ್ ಕಂಧಲ್ವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಂದಿನಿಂದ ಮೌಲಾನಾ ಸಾರ್ವಜನಿಕ ಪ್ರದೆಶದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಕೆಲ ವಕೀಲರು ತಾವು ಕಂಧಲ್ವಿಯ ವಕೀಲರು ಎಂದು ಹೇಳಿಕೊಳ್ಳುತ್ತದ್ದಾರೆ.
ಮೌಲಾನಾ ಸಾದ್ ಅವರ ಕಾನೂನು ಸಲಹೆಗಾರ ಎಂದು ಹೇಳಿಕೊಳ್ಳುವ ವಕೀಲ ಮುಜೀಬ್-ಉರ್-ರೆಹಮಾನ್ ಅವರು ಮಾಧ್ಯಮಗಳಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ, ಮೊಹಮ್ಮದ್ ತೌಸೀಫ್ ಎಂಬ ವಕೀಲ ತಾನು ತಬ್ಲೀಘಿ ಜಮಾಅತ್ ಪರ ವಕೀಲ ಎಂದು ಹೇಳಿಕೊಂಡಿದ್ದಾರೆ, ಆದರೆ ಇದು ನಿಜವಲ್ಲ. ಸ್ಥಳಾಂತರಿಸುವ ಸಮಯದಲ್ಲಿ ಅವರು ಅಲ್ಲಿದ್ದುಕೊಂಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಹೀಗಾಗಿ ತಮ್ಮನ್ನು ತಬ್ಲೀಘಿ ಜಮಾಅತ್ ವಕೀಲ ಎಂದು ಹೇಳಿಕೊಳ್ಳುತ್ತಿದ್ದರು ಎಂದಿದ್ದಾರೆ.
ಎಷ್ಟು ವಕೀಲರು ಇದ್ದಾರೆ?
ತಬ್ಲೀಘಿ ಜಮಾಅತ್ ಪರ ವಕೀಲರಾಗಿ ನಾಲ್ಕು ಜನ ಮುಂದೆ ಬಂದಿದ್ದಾರೆ. ತಬ್ಲೀಘಿ ಜಮಾತ್ ಮರ್ಕಜ್ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಕೊರೊನಾ ವೈರಸ್ ಹರಡಿದ್ದಾರೆ ಎಂದು ಆರೋಪ ಬಂದಾಗಿನಿಂದ, ನಾಲ್ಕು ಜನರು ಮಾಧ್ಯಮಗಳ ಮುಂದೆ ಬಂದು ತಾವು ತಬ್ಲೀಘಿ ಜಮಾಅತ್ ಪರವಿರುವ ವಕೀಲರೆಂದು ಹೇಳಿದ್ದಾರೆ.
ಸ್ಥಳಾಂತರಿಸಿದ ಮೊದಲ ದಿನ ಮೊಹಮ್ಮದ್ ಅಶ್ರಫ್ ಎಂಬ ವಕೀಲ ಮಾಧ್ಯಮಗಳನ್ನು ಉದ್ದೇಶಿಸಿ ತಬ್ಲೀಘಿ ಜಮಾಅತನ್ನು ಸಮರ್ಥಿಸಿಕೊಂಡಿದ್ದರು. ಆಗ ಅವರೊಂದಿಗೆ ಮುಜೀಬ್-ಉರ್-ರಹಮಾನ್ ಕೂಡಾ ಇದ್ದು, ತಾನು ತಬ್ಲೀಘಿ ಜಮಾಅತನ್ನು ಪ್ರತಿನಿಧಿಸುತ್ತಿದ್ದು, ಕಾನೂನು ಸಮಸ್ಯೆಗಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಮರುದಿನ, ಮತ್ತೊಬ್ಬ ವಕೀಲ ಮೊಹಮ್ಮದ್ ತೌಸಿಫ್, ತಬ್ಲೀಘಿ ಜಮಾಅತ್ ಮಾರ್ಕಾಜ್ ಬಳಿ ಬಂದು ಪೊಲೀಸರೊಂದಿಗೆ ಮಾತನಾಡುತ್ತಾ, ಮೌಲಾನಾ ಸಾದ್ ಅವರ ವಕೀಲರ ಕೆಲಸವನ್ನು ನನಗೆ ನೀಡಲಾಗಿದೆ ಎಂದು ಹೇಳಿದರು. ಇನ್ನೊಬ್ಬ ವಕೀಲ ಮೊಹಮ್ಮದ್ ಶಾಹಿದ್, ತಾನು ತಬ್ಲೀಘಿ ಜಮಾಅತ್ ಪರ ವಕೀಲ ಎಂದು ಹೇಳಿದ್ದಾರೆ.
ನಿಜವಾದ ವಕೀಲರು ಯಾರು?
ಮೌಲಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರು ಹಲವಾರು ಪ್ರಮುಖ ವಕೀಲರನ್ನು ಹೊಂದಿದ್ದಾರೆ ಎಂದು ತಬ್ಲಿಘಿ ಜಮಾಅತ್‌ನ ಪ್ರಮುಖ ಸದಸ್ಯರೊಬ್ಬರು ತಿಳಿಸಿದ್ದಾರೆ. ಕಾನೂನು ಸಹಾಯ ಮಾಡಲು ಹಲವು ವಕೀಲರು ಸ್ವ ಇಚ್ಛೆಯಿಂದ ಮುಂದೆ ಬಂದಿದ್ದಾರೆ ಎಂದು ಹೇಳಲಾಗಿದೆ.
ತಬ್ಲೀಘಿ ಜಮಾಅತ್ ಮುಖ್ಯಸ್ಥರು ಅನೇಕ ಆಡಿಯೊ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದರೂ, ಅವರ ವಕೀಲ ಯಾರೆಂದು ಇನ್ನೂ ಬಹಿರಂಗಪಡಿಸಿಲ್ಲ. ಅನೇಕ ವಕೀಲರು ತಾವು ಕಂಧಲ್ವಿಯ ಕಾನೂನು ಸಲಹೆಗಾರರಾಗಿರುವುದಾಗಿ ಹೇಳಿಕೊಂಡರೂ, ನಿಜವಾದ ವಕೀಲ ಯಾರೆಂದು ತಿಳಿದುಬಂದಿಲ್ಲ.