ಜಿನೇವಾ : ಕೋವಿಡ್-19 ಬಿಕ್ಕಟ್ಟಿನ ಆರಂಭಿಕ ಹಂತಗಳಲ್ಲಿ 'ವೈರಲ್ ನ್ಯುಮೋನಿಯಾ' ಪ್ರಕರಣಗಳ ಕುರಿತು ಚೀನಾದ ವಿಶ್ವ ಆರೋಗ್ಯ ಸಂಸ್ಥೆಯ ಕಂಟ್ರಿ ಆಫೀಸ್ ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್‌ನಿಂದ ಹೇಳಿಕೆ ಪಡೆದುಕೊಂಡಿದೆ.
ಡಬ್ಲ್ಯೂಹೆಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಏಕಾಏಕಿ ಕೊರೊನಾ ಕುರಿತು ತಿಳುವಳಿಕೆ ಹೆಚ್ಚಿಸುವ ಸಲುವಾಗಿ ಅಂತಾರಾಷ್ಟ್ರೀಯ ತಜ್ಞರ ತಂಡವನ್ನು ಆದಷ್ಟು ಬೇಗ ಚೀನಾಗೆ ಕಳುಹಿಸುವ ಕುರಿತು ಮಾತನಾಡಿದ್ದಾರೆ.
ಕೊರೊನಾ ವೈರಸ್ ಏಕಾಏಕಿ ಹರಡಿದ ಕುರಿತು ಚೀನಾ ಮಾಹಿತಿ ನೀಡುವುದರಲ್ಲಿ ವಿಳಂಬ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳ ವ್ಯಕ್ತವಾದ ಹಿನ್ನೆಲೆ ಡಬ್ಲ್ಯೂಹೆಚ್‌ಒದ ಒಂದು ತಂಡವು ಮುಂದಿನ ವಾರ ಚೀನಾಗೆ ಭೇಟಿ ನೀಡಿ ವೈರಸ್‌ನ ಉಗಮ ಮತ್ತು ಅದು ಮಾನವರಿಗೆ ಹೇಗೆ ಹರಡಿತು ಎಂದು ಮಾಹಿತಿ ಕಲೆ ಹಾಕಲು ನಿರ್ಧರಿಸಿದೆ.
ಕೋವಿಡ್-19ನಿಂದಾಗಿ ವಿಶ್ವದಾದ್ಯಂತ 5 ಲಕ್ಷಕ್ಕೂ ಹೆಚ್ಚಿನ ಜನ ಬಲಿಯಾಗಿದ್ದಾರೆ. ಪ್ರಕರಣ ಹಾಗೂ ಸಾವಿನ ಸಂಖೈ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.