ETV Bharat / bharat

'ಶಾಂತವಾದ ರೆಜಾಂಗ್ ಲಾದಲ್ಲಿ ಮೊದಲ ಗುಂಡು ಹಾರಿದಾಗ ಸತ್ಯ ಸತ್ತು ಹೋಗಿದೆ'

author img

By

Published : Sep 9, 2020, 7:53 AM IST

Updated : Sep 9, 2020, 8:54 AM IST

ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ನಡುವೆ ಪಾಂಗೊಂಗ್ ತ್ಸೋ ದಕ್ಷಿಣದ ದಂಡೆಯಲ್ಲಿರುವ ರೆಜಾಂಗ್ ಲಾ ಬಳಿಯ ಮುಖ್ಪಾರಿ ಪರ್ವತದ ಸುತ್ತಮುತ್ತಲ ಪ್ರದೇಶದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಯಾರು ದಾಳಿ ನಡೆಸಿದರು ಎಂಬ ಬಗ್ಗೆ ಇನ್ನೂ ಕೂಡ ಸ್ಪಷ್ಟವಾಗಿಲ್ಲ.

When gunshots rang out, truth died a little in the cold ridges of Rezang La
ಭಾರತ ಚೀನಾ ನಡುವೆ ಸಂಘರ್ಷ

ನವದೆಹಲಿ: ಯುದ್ಧಗಳು ಮತ್ತು ಸಂಘರ್ಷಗಳ ಮಂಜಿನಲ್ಲಿ ಸತ್ಯಕ್ಕೆ ಮೊದಲು ಅಪಾಯ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಭಾರತ-ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸೋಮವಾರ ಪಾಂಗೊಂಗ್ ತ್ಸೋ ದಕ್ಷಿಣದ ದಂಡೆಯಲ್ಲಿರುವ ರೆಜಾಂಗ್ ಲಾ ಬಳಿಯ ಮುಖ್ಪಾರಿ ಪರ್ವತದ ಸುತ್ತಮುತ್ತಲ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಯಾರು ಪ್ರಚೋದನೆ ನೀಡಿದರು ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಗುಂಡಿನ ದಾಳಿ ನಡೆದಿದೆ ಎಂದು ಭಾರತೀಯ ಮತ್ತು ಚೀನಾ ಸೇನೆ ಒಪ್ಪಿಕೊಂಡರೂ ನಾವು ಗುಂಡು ಹಾರಿಸಿಲ್ಲ. ಅವರೇ ಗುಂಡು ಹಾರಿಸಿದ್ದು ಎಂದು ಪರಸ್ಪರ ದೂಷಿಸಿವೆ.

ರೆಜಾಂಗ್ ಲಾ ಬಳಿಯ ಎನ್‌ಕೌಂಟರ್ ಸ್ಥಳದಲ್ಲಿ ಬಂದೂಕುಗಳನ್ನು ಹಿಡಿದಿರುವ ಶಸ್ತ್ರಸಜ್ಜಿತವಾದ ಪಿಎಲ್‌ಎ ಸೈನಿಕರ ಚಿತ್ರಗಳು ಮತ್ತು 'ಗ್ವಾಂಡಾವೊ', ಶಾವೊಲಿನ್ ಕುಂಗ್ ಫೂ ಫೈಟರ್​ಗಳು ಬಳಸುವ ನೆಚ್ಚಿನ ಆಯುಧ-ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

1975ರ ನಂತರ ಇದೇ ಮೊದಲ ಬಾರಿಗೆ ಎಲ್​​ಎಸಿ ಬಳಿ ಗುಂಡಿನ ಸದ್ದು ಕೇಳಿ ಬಂದಿದ್ದು, ಉಭಯರ ನಡುವಿನ ಪರಸ್ಪರ ಒಪ್ಪಿಗೆಯ ನಿಯಮಗಳ ಅವಶೇಷಗಳನ್ನು ನಾಶಪಡಿಸಲಾಗಿದೆ. ಬಂದೂಕುಗಳ ಬಳಕೆಯನ್ನು ಆಶ್ರಯಿಸದಿರುವುದು ಮಾತ್ರವಲ್ಲದೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವಾಗ ಶಸ್ತ್ರಾಸ್ತ್ರಗಳನ್ನು ಸಾಗಿಸಬಾರದು ಎಂಬ ನಿರ್ಧಾರವನ್ನು ಒಳಗೊಂಡಿತ್ತು.

ಪಿಎಲ್‌ಎಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರ ಹೇಳಿಕೆಯನ್ನು ಟ್ವೀಟ್ ಮಾಡಿದ ಚೀನಾ ಸರ್ಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’, 'ಭಾರತೀಯ ಸೇನೆಯು ಸೋಮವಾರ ಪಾಂಗೊಂಗ್ ತ್ಸೋ ಸರೋವರದ ದಕ್ಷಿಣ ದಂಡೆಯ ಬಳಿಯ ಶೆನ್‌ಪಾವೊ ಪರ್ವತದಲ್ಲಿ ಎಲ್‌ಎಸಿಯನ್ನು ಅಕ್ರಮವಾಗಿ ದಾಟಿದೆ' ಎಂದಿದೆ.

ಚೀನಾ ಹೇಳಿಕೆಗೆ ಭಾರತೀಯ ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿದ್ದು, 'ವೆಸ್ಟರ್ನ್ ಥಿಯೇಟರ್ ಕಮಾಂಡ್ ಹೇಳಿಕೆಯು ಅವರ ದೇಶದ ಮತ್ತು ಅಂತಾರಾಷ್ಟ್ರೀಯ ಜನ ಸಮುದಾಯವನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ' ಎಂದಿದೆ.

ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, 'ಸೋಮವಾರ ಸುಮಾರು 50-60 ಪ್ರಬಲ ಪಿಎಲ್‌ಎ ಗುಂಪು ರೆಜಾಂಗ್ ಲಾ ಬಳಿಯ ಮುಖ್‌ಪಾರಿ ಬಳಿ ಎತ್ತರದಲ್ಲಿದ್ದ ನಮ್ಮ ಸ್ಥಾನಗಳತ್ತ ಸಾಗಿತು. ಅಲ್ಲಿ ನಾವು ಈಗಾಗಲೇ ರಕ್ಷಣಾತ್ಮಕ ಕ್ರಮವಾಗಿ ತಂತಿ ಬೇಲಿ ಹಾಕಿದ್ದೇವೆ' ಎಂದಿದ್ದಾರೆ.

Last Updated : Sep 9, 2020, 8:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.