ಫೋನ್ ಇಲ್ಲದ ವ್ಯಕ್ತಿಗಳನ್ನು ಹೇಗೆ ಊಹಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ವಾಟ್ಸಾಪ್ ಇಲ್ಲದ ಫೋನ್ಗಳನ್ನು ಊಹಿಸಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ವಾಟ್ಸ್ಯಾಪ್ ಈಗ 5 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ಫೇಸ್‌ಬುಕ್ ಒಡೆತನದ ವಾಟ್ಸ್ಯಾಪ್ ಐದು ಶತಕೋಟಿ ಡೌನ್ಲೋಡ್ ಹೊಂದಿದೆ. ಇನ್ನು ಈ ದೊಡ್ಡ ಮೈಲಿಗಲ್ಲನ್ನು ಸಾಧಿಸಿದ ಗೂಗಲ್ ನಂತರದ ಎರಡನೇ ಅಪ್ಲಿಕೇಶನ್ ಇದಾಗಿದೆ.
ಅಂಕಿ ಅಂಶದ ಪ್ರಕಾರ ವಿಶ್ವದಾದ್ಯಂತ ಸುಮಾರು 1.6 ಬಿಲಿಯನ್ ತಿಂಗಳ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜಾಗತಿಕ ಮೊಬೈಲ್ ಮೆಸ್ಸೆಂಜರ್ ಅಪ್ಲಿಕೇಶನ್ ಇದಾಗಿದೆ. ಇನ್ನುಳಿದಂತೆ ಕಳೆದ ವರ್ಷದ ದಾಖಲೆಯಂತೆ ಫೇಸ್‌ಬುಕ್ ಮೆಸೆಂಜರ್ ಅನ್ನು 1.3 ಬಿಲಿಯನ್ ಮತ್ತು ವೀ ಚಾಟ್ 1.1 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಮತ್ತು ಯೂಟ್ಯೂಬ್ ಹೊರತುಪಡಿಸಿ ಅತಿ ಹೆಚ್ಚು ಬಳಕೆಯ ಮೂರನೇ ಆ್ಯಪ್ ಇದಾಗಿದೆ.
ದಕ್ಷಿಣ ಕೊರಿಯಾ ವೇಗವಾಗಿ ಬೆಳೆಯುತ್ತಿರುವ ವಾಟ್ಸ್ಯಾಪ್ ಮಾರುಕಟ್ಟೆಯಾಗಿದ್ದು, 2019 ರಲ್ಲಿ ಮೆಸ್ಸೆಜಿಂಗ್ ಅಪ್ಲಿಕೇಶನ್‌ನ ಡೌನ್‌ಲೋಡ್‌ಗಳ ಅಂಕಿ ಅಂಶದಲ್ಲಿ 56 ಪ್ರತಿಶತದಷ್ಟು ಹೆಚ್ಚಾಗಿದೆ. 2019 ರ ಕೊನೆಯಲ್ಲಿ ಫೇಸ್‌ಬುಕ್‌ನ ಡೌನ್ಲೋಡ್ಗಳು ಸುಮಾರು 800 ಮಿಲಿಯನ್ ಇದ್ದರೆ ಗೂಗಲ್ 850 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿತ್ತು ಎಂದು ವಿಶ್ಲೇಷಣಾ ಸಂಸ್ಥೆಯಾದ ಸೆನ್ಸಾರ್ ಟವರ್ ಇತ್ತೀಚೆಗೆ ಬಹಿರಂಗಪಡಿಸಿದೆ. ಕಳೆದ 12 ತಿಂಗಳಲ್ಲಿ ಗೂಗಲ್ ಸುಮಾರು 2.3 ಬಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದರೆ, ಫೇಸ್‌ಬುಕ್ ಸುಮಾರು 3 ಬಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದೆ.
ಇನ್ನು, ಪ್ರಪಂಚದಾದ್ಯಂತ ಡೌನ್ಲೋಡ್ ಮಾಡಲಾದ ಆ್ಯಪ್ಗಳಲ್ಲಿ ಫೇಸ್‌ಬುಕ್ ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಮೆಸ್ಸೆಂಜರ್ ಸೇರಿವೆ. ಆದರೆ, ಈ ಎಲ್ಲಾ ಆ್ಯಪ್ಗಳನ್ನು ಹಿಂದಿಕ್ಕಿ ಈಗ ಟಿಕ್ಟಾಕ್ ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿಕೊಳ್ಳುತ್ತಿದೆ. ಜಗತ್ತಿನಲ್ಲಿ ಹೆಚ್ಚು ಡೌನ್ಲೋಡ್ ಮಾಡಲಾದ ಎರಡನೇ ಆ್ಯಪ್ ಇದಾಗಿದೆ.