ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಸೇವೆಯಲ್ಲಿ ಬುಧವಾರ ಭಾರತ ಸೇರಿದಂತೆ ವಿಶ್ವದಾದ್ಯಂತ ಕೆಲ ಗಂಟೆಗಳ ಕಾಲ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸ್ಆ್ಯಪ್ ಟ್ರೋಲ್ಗೆ ಗುರಿಯಾಗಿದೆ.
ಬುಧವಾರ ಬೆಳಗಿನಜಾವ ಸುಮಾರು 1:32 ಗಂಟೆಯಿಂದ ಸಮಸ್ಯೆ ಆರಂಭವಾಗಿದ್ದು, ಹೆಚ್ಚಿನ ಬಳಕೆದಾರರು (ಶೇಕಡಾ 72) ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಸಮಸ್ಯೆ ಎದುರಿಸಿದರು. ಅಲ್ಲದೆ ಲಾಗ್-ಇನ್ ಆಗಲೂ ಕೂಡ ಆಗುತ್ತಿರಲಿಲ್ಲ. ಸುಮಾರು 1.5 ಬಿಲಿಯನ್ಗಿಂತ ಹೆಚ್ಚಿನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಆ್ಯಪ್ಗೆ ಲಾಗ್-ಇನ್ ಆಗಲು ಪರದಾಡುವಂತಾಗಿತ್ತು.
ಕಾರ್ಯನಿರ್ವಹಣೆಯಲ್ಲಿ ಅಡಚಣೆಗೆ ಕಾರಣ ಏನೆಂಬುದರ ಬಗ್ಗೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಸಮಸ್ಯೆ ಕುರಿತಂತೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗಳ ಮೂಲಕ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.