ನವದೆಹಲಿ: ಪ್ರಧಾನಿ ಮೋದಿ ಮಹತ್ವದ ವಿಚಾರವನ್ನು ದೇಶದ ಮುಂದಿಡುವುದಾಗಿ ಟ್ವೀಟ್ ಮಾಡಿದ್ದು ಇಂದು ಬೆಳಗ್ಗೆ ನಿದ್ದೆಗಣ್ಣಲ್ಲಿದ್ದ ಹಲವಾರು ಮಂದಿಯನ್ನು ಬಡಿದೆಬ್ಬಿಸಿತ್ತು.
ಮಧ್ಯಾಹ್ನ 12.30ರ ಸುಮಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ತರ ಸಾಧನೆ ಮಾಡಿದೆ. ಮಿಷನ್ ಶಕ್ತಿ ಹೆಸರಿನ ಈ ಆಪರೇಷನ್ ಕ್ರೆಡಿಟ್ ಸಂಪೂರ್ಣ ಡಿಆರ್ಡಿಒ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಹೇಳುತ್ತಾ ಮುಂದುವರೆದರು. ಅಷ್ಟಕ್ಕೂ ಮಿಷನ್ ಶಕ್ತಿ ಏನು ಎಂದು ಹುಡುಕುತ್ತಾ ಸಾಗಿದಾಗ ಯುಪಿಎ ಸರ್ಕಾರ ಅವಧಿಗೆ ತೆರಳುತ್ತದೆ. ಮಿಷನ್ ಶಕ್ತಿ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ...
#WATCH Simulation of the #ASAT BMD interceptor missile (video courtesy: Defence sources) #MissionShakti pic.twitter.com/U5Bot6tFx3
— ANI (@ANI) March 27, 2019 " class="align-text-top noRightClick twitterSection" data="
">#WATCH Simulation of the #ASAT BMD interceptor missile (video courtesy: Defence sources) #MissionShakti pic.twitter.com/U5Bot6tFx3
— ANI (@ANI) March 27, 2019#WATCH Simulation of the #ASAT BMD interceptor missile (video courtesy: Defence sources) #MissionShakti pic.twitter.com/U5Bot6tFx3
— ANI (@ANI) March 27, 2019
ಡಿಆರ್ಡಿಒದ ವಿಜ್ಞಾನಿಗಳ ತಂಡ ಕೇವಲ ಮೂರು ನಿಮಿಷದಲ್ಲಿ ಆ್ಯಂಟಿ ಸ್ಯಾಟಲೈಟ್ ಮೂಲಕ ಕಾರ್ಯನಿರತ ಸ್ಯಾಟಲೈಟ್ ಒಂದನ್ನು ಹೊಡೆರುಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಕಾಣಿಸಿಕೊಂಡಿದೆ. ಈಗಾಗಲೇ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಈ ಇದನ್ನು ಸಾಧಿಸಿ ತೋರಿಸಿವೆ.
ಎ-ಸ್ಯಾಟ್ ನಿರ್ಮಾಣ ಹಾಗೂ ಆ ಬಗೆಗಿನ ಪ್ರಕ್ರಿಯೆಗಳು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರಂಭವಾಗಿತ್ತು ಎನ್ನುವುದನ್ನು ಕಾಂಗ್ರೆಸ್ ಮೋದಿ ಭಾಷಣದ ಬಳಿಕ ಹೇಳಿಕೊಂಡಿದೆ. ಎ-ಸ್ಯಾಟ್ ಪ್ರಾಜೆಕ್ಟ್ ಯುಪಿಎ ಸರ್ಕಾರದ್ದು ಎಂದು ಕೈ ನಾಯಕರು ಟ್ವೀಟ್ ಮಾಡಿದ್ದಾರೆ. ಎ-ಸ್ಯಾಟ್ ಪ್ರಾಜೆಕ್ಟ್ 2010ರ ವೇಳೆ ಆರಂಭವಾಗಿತ್ತು, 2012ರ ಬಳಿಕ ಪ್ರಾಜೆಕ್ಟ್ ವೇಗ ಪಡೆದಿತ್ತು.
ಏನಿದು ಆ್ಯಂಟಿ ಸ್ಯಾಟಲೈಟ್(ಎ-ಸ್ಯಾಟ್):
ಆ್ಯಂಟಿ ಸ್ಯಾಟಲೈಟ್ ಕೆಳಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿರೋಧಿ ರಾಷ್ಟ್ರಗಳು ಯುದ್ಧೋದ್ದೇಶದಿಂದ ಉಡ್ಡಯನ ಮಾಡಿರುವ ಉಪಗ್ರಹಗಳನ್ನ ಹೊಡೆದು ಹಾಕುವ ವ್ಯವಸ್ಥೆ ಆಗಿದೆ. ಎ-ಸ್ಯಾಟ್ಗಳು ಕಾರ್ಯದಲ್ಲಿರುವ ಅಥವಾ ನಿಷ್ಕ್ರಿಯಗೊಂಡಿರುವ ಸ್ಯಾಟಲೈಟ್ಗಳನ್ನು ಗುರಿಯಿಟ್ಟು ಹೊಡೆಯಲೆಂದೇ ನಿರ್ಮಾಣ ಮಾಡಿರುವ ವ್ಯವಸ್ಥೆ ಆಗಿದೆ. ಈ ಎ - ಸ್ಯಾಟ್ ಪರೀಕ್ಷೆಯನ್ನು ಭಾರತ ನಡೆಸಿ ಇಂದು ಯಶಸ್ವಿಯಾಗಿದೆ. ಬಾಹ್ಯಾಕಾಶ ಹಾಗೂ ಭದ್ರತಾ ವಿಚಾರದಲ್ಲಿ ಇದು ಬಹುದೊಡ್ಡ ಗೆಲುವು ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎ-ಸ್ಯಾಟ್ ಸಂಫೂರ್ಣ ಭಾರತೀಯ ನಿರ್ಮಿತ ಎನ್ನುವುದು ಮತ್ತೊಂದು ಗಮನಾರ್ಹ ಸಂಗತಿ.
The UPA government had initiated the ASAT program which has reached fruition today
— Ahmed Patel (@ahmedpatel) March 27, 2019 " class="align-text-top noRightClick twitterSection" data="
I congratulate our space scientists & the visionary leadership of Dr Manmohan Singhhttps://t.co/pJHBVGo5GA
">The UPA government had initiated the ASAT program which has reached fruition today
— Ahmed Patel (@ahmedpatel) March 27, 2019
I congratulate our space scientists & the visionary leadership of Dr Manmohan Singhhttps://t.co/pJHBVGo5GAThe UPA government had initiated the ASAT program which has reached fruition today
— Ahmed Patel (@ahmedpatel) March 27, 2019
I congratulate our space scientists & the visionary leadership of Dr Manmohan Singhhttps://t.co/pJHBVGo5GA
ಮತ್ತೊಂದು ಮಹತ್ವದ ವಿಚಾರವೆಂದರೆ ಎ-ಸ್ಯಾಟ್ಗಳನ್ನು ಯುದ್ಧದ ಸಂದರ್ಭದಲ್ಲಿ ಬಳಸಬಹುದು. ಆದರೆ ಇಲ್ಲಿಯವರೆಗೂ ಎ-ಸ್ಯಾಟ್ಗಳನ್ನು ಬಳಿಸಿದ ಉದಾಹರಣೆಗಳಿಲ್ಲ. ಇಂದಿನ ಭಾಷಣದಲ್ಲಿ ಮೋದಿ ಸಹ ಭಾರತ ಮೊದಲಾಗಿ ಎ-ಸ್ಯಾಟ್ಗಳನ್ನು ಯುದ್ಧದಲ್ಲಿ ಬಳಕೆ ಮಾಡುವುದಿಲ್ಲ ಎಂದು ವಿಶ್ವಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕವೇ ಮೊದಲು..!
1958ರಲ್ಲಿ ಅಮೆರಿಕ ಎ-ಸ್ಯಾಟ್ ಅನ್ನು ಮೊದಲಿಗೆ ಪರೀಕ್ಷೆ ನಡೆಸಿತ್ತು. 2008ರಲ್ಲಿ ನಿಷ್ಕ್ರಿಯಗೊಂಡಿದ್ದ ಬೇಹುಗಾರಿಕಾ ಸ್ಯಾಟಲೈಟ್ ಒಂದನ್ನು ಯಶಸ್ವಿಯಾಗಿ ಅಮೆರಿಕ ಎ-ಸ್ಯಾಟ್ ಹೊಡೆದುರುಳಿಸಿತ್ತು. ಈ ಮೂಲಕ ವಿಶ್ವಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಂಡಿತ್ತು.
2007ರಲ್ಲಿ ಚೀನಾ ಎರಡನೇ ರಾಷ್ಟ್ರವಾಗಿ ಎ-ಸ್ಯಾಟ್ ಪರೀಕ್ಷೆ ನಡೆಸಿತ್ತು. ಹವಾಮಾನ ವರದಿಗೆ ಪೂರಕವಾಗಿದ್ದ ಸ್ಯಾಟಲೈಟ್ ಅನ್ನು ಚೀನಾ ಎ-ಸ್ಯಾಟ್ ಮೂಲಕ ಹೊಡೆದುರಳಿಸಿತ್ತು. 2015ರಲ್ಲಿ ರಷ್ಯಾ ಸಹ ಆ್ಯಂಟಿ ಸ್ಯಾಟಲೈಟ್ ಪರೀಕ್ಷಾರ್ಥ ಪ್ರಯೋಗ ನಡೆಸಿದ ಮೂರನೇ ದೇಶವಾಗಿ ಗುರುತಿಸಿಕೊಂಡಿತು. ಇದೀಗ ಭಾರತ ಈ ಸೂಪರ್ ಪವರ್ ದೇಶಗಳ ಸಾಲಿಗೆ ಸೇರಿಕೊಂಡಿದೆ.
30 ಬಾರಿ ವಿಫಲವಾಗಿತ್ತು ಚೀನಾ:
ವಿಶೇಷ ಎಂದರೆ, ಚೀನಾ 30 ಬಾರಿ ಈ ಪರೀಕ್ಷೆಯಲ್ಲಿ ಫೇಲ್ ಆಗಿತ್ತು. 30 ಬಾರಿ ವಿಫಲ ಪ್ರಯತ್ನ ಮಾಡಿ ಆ ಬಳಿಕ ಸಫಲವಾಗಿತ್ತು.
#WATCH Live: FM Arun Jaitley addresses a press conference in Delhi https://t.co/NkhCensQ3t
— ANI (@ANI) March 27, 2019 " class="align-text-top noRightClick twitterSection" data="
">#WATCH Live: FM Arun Jaitley addresses a press conference in Delhi https://t.co/NkhCensQ3t
— ANI (@ANI) March 27, 2019#WATCH Live: FM Arun Jaitley addresses a press conference in Delhi https://t.co/NkhCensQ3t
— ANI (@ANI) March 27, 2019
ಕಾಂಗ್ರೆಸ್ಗೆ ಸಮರ್ಥ ಎದಿರೇಟು ಕೊಟ್ಟ ಜೇಟ್ಲಿ:
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಆರ್ಡಿಒ ಅನುಮತಿ ಕೇಳಿತ್ತು. ಆದರೆ, ಡಿಆರ್ಡಿಒಗೆ ಮನಮೋಹನ್ ಸಿಂಗ್ ಸರ್ಕಾರ ಯಾವುದೇ ಅನುಮತಿ ನೀಡಿರಲಿಲ್ಲ. ಮೋದಿ ಸರ್ಕಾರ 2014 ರಲ್ಲಿ ಈ ಯೋಜನೆಗೆ ಅನುಮತಿ ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಭಾರತ ಸರ್ಕಾರ ಹಾಗೂ ಡಿಆರ್ಡಿಒ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದು ಬಿಜೆಪಿ ಕಾರ್ಯಕ್ರಮವಲ್ಲ. ದೇಶದ ಹಿತದೃಷ್ಟಿಯಿಂದ ಕೈಗೊಂಡ ಮಹತ್ವದ ಯೋಜನೆ. ಈ ಎಲ್ಲ ಯಶಸ್ಸಿನ ಶ್ರೇಯ ಡಿಆರ್ಡಿಒಗೆ ಸಲ್ಲುತ್ತದೆ ಎಂದೂ ಇದೇ ವೇಳೆ ಹೇಳಿದರು.