ETV Bharat / bharat

ಡೋನಟ್ ಎಕನಾಮಿಕ್ಸ್.. ಕೊರೊನಾದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರುವ ಉಪಾಯ

author img

By

Published : Jul 26, 2020, 5:19 PM IST

‘ಡೋನಟ್ ಎಕನಾಮಿಕ್ಸ್’ ಸುತ್ತಮುತ್ತಲಿನ ಚರ್ಚೆಗಳು ವೇಗವನ್ನು ಪಡೆದುಕೊಂಡಿವೆ. ಇದು ಆರ್ಥಿಕ ಸಿದ್ಧಾಂತವಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೇಟ್ ರಾವರ್ತ್ ಅವರು ತಮ್ಮ 2017 ರ ಪುಸ್ತಕದಲ್ಲಿ ‘ಡೋನಟ್ ಎಕನಾಮಿಕ್ಸ್: ಸೆವೆನ್ ವೇಸ್ ಟು ಥಿಂಕ್ ಲೈಕ್ ಎ 21 ಸೆಂಚ್ಯುರಿ ಎಕಾನಾಮಿಕ್ಸ್​’ ಎಂಬ ಪುಸ್ತಕದಲ್ಲಿ ಅಭಿವೃದ್ಧಿಪಡಿಸಿದ್ದಾರೆ..

doughnut economics ಡೋನಟ್ ಎಕನಾಮಿಕ್ಸ್
ಡೋನಟ್ ಎಕನಾಮಿಕ್ಸ್

ಹೈದರಾಬಾದ್ : ಕೋವಿಡ್-19 ಸಾಂಕ್ರಾಮಿಕವು ಜಗತ್ತನ್ನು ಸ್ಥಗಿತಗೊಳಿಸಿದೆ. ಈ ಸಮಯದಲ್ಲಿ ದೇಶಗಳು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಗಳಲ್ಲಿನ ಆಳವಾದ ಮೂಲ ನ್ಯೂನತೆಗಳನ್ನು ಬಹಿರಂಗಪಡಿಸಿದೆ. ವೈರಸ್​ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಜಾಗತಿಕ ಜನಸಂಖ್ಯೆಯ ಬಹುಪಾಲು ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಕೊರೊನಾ ವೈರಸ್​ನಿಂದ ಜಾಗತಿಕ ಬಡತನವು ಒಂದು ಶತಕೋಟಿಗೂ ಅಧಿಕ ಜನರಿಗೆ ಏರಬಹುದು ಎಂದು ಇತ್ತೀಚಿನ ಸಂಶೋಧನಾ ವರದಿಯೊಂದು ತಿಳಿಸಿದೆ.

ಅಂತಹ ಬಿಕ್ಕಟ್ಟಿನ ಮಧ್ಯೆ, ‘ಡೋನಟ್ ಎಕನಾಮಿಕ್ಸ್’ ಸುತ್ತಮುತ್ತಲಿನ ಚರ್ಚೆಗಳು ವೇಗವನ್ನು ಪಡೆದುಕೊಂಡಿವೆ. ಇದು ಆರ್ಥಿಕ ಸಿದ್ಧಾಂತವಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೇಟ್ ರಾವರ್ತ್ ಅವರು ತಮ್ಮ 2017ರ ಪುಸ್ತಕದಲ್ಲಿ ‘ಡೋನಟ್ ಎಕನಾಮಿಕ್ಸ್: ಸೆವೆನ್ ವೇಸ್ ಟು ಥಿಂಕ್ ಲೈಕ್ ಎ 21 ಸೆಂಚ್ಯುರಿ ಎಕಾನಾಮಿಕ್ಸ್​’ ಎಂಬ ಪುಸ್ತಕದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಆರ್ಥಿಕ ಚಟುವಟಿಕೆಯ ಗುರಿ "ಗ್ರಹದ ಸಾಧನಗಳಲ್ಲಿ ಎಲ್ಲರ ಅಗತ್ಯಗಳನ್ನು ಪೂರೈಸುವುದು" ಎಂದು ಸಿದ್ಧಾಂತವು ವಾದಿಸುತ್ತದೆ. ಇದು ಸರಳ ವೃತ್ತಾಕಾರದ ರೇಖಾಚಿತ್ರದ ಮೂಲಕ ಹೆಚ್ಚು ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ.

doughnut economics ಡೋನಟ್ ಎಕನಾಮಿಕ್ಸ್
ಡೋನಟ್ ಎಕನಾಮಿಕ್ಸ್

ರೇಖಾಚಿತ್ರವು ಮೂಲತಃ ಡೋನಟ್ ಹೋಲುವ ಎರಡು ಉಂಗುರಗಳನ್ನು ಒಳಗೊಂಡಿದೆ. ಡಫ್ನಟ್ ಕೇಂದ್ರದಲ್ಲಿನ ರಂಧ್ರವು ಆಹಾರ, ನೀರು, ಆರೋಗ್ಯ ರಕ್ಷಣೆ ಮತ್ತು ರಾಜಕೀಯ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಅಗತ್ಯಗಳಿಗೆ ಕಡಿಮೆಯಾಗುವ ವಿಶ್ವಾದ್ಯಂತ ಜನರ ಪ್ರಮಾಣವನ್ನು ಬಹಿರಂಗಪಡಿಸುತ್ತದೆ.

ಹೊರಗಿನ ಉಂಗುರದ ಪ್ರದೇಶವು ಭೂಮಿಯ ಪರಿಸರ ಮಿತಿಗಳನ್ನು ಪ್ರತಿನಿಧಿಸುತ್ತದೆ. ಎರಡು ಉಂಗುರಗಳ ನಡುವಿನ ಪ್ರದೇಶದಲ್ಲಿ ಮಾನವರು ಬದುಕಲು ಶ್ರಮಿಸಬೇಕು. ಆದ್ದರಿಂದ, ಡೋನಟ್ ಅರ್ಥಶಾಸ್ತ್ರದ ಉದ್ದೇಶವೆಂದರೆ ಹೆಚ್ಚಿನ ಜನರು ‘ಡೋನಟ್’ ಪ್ರದೇಶವನ್ನು ಪ್ರವೇಶಿಸಿ ಅಲ್ಲಿ ‘ಸುಸ್ಥಿರವಾಗಿ’ ಉಳಿಯಲು ಅವಕಾಶ ನೀಡುವುದು.

ಆಮ್​ಸ್ಟರ್‌ಡ್ಯಾಮ್‌ನ ಕಥೆ : ಏಪ್ರಿಲ್ 2020ರಲ್ಲಿ ಒಂದು ವರ್ಷದ ಚರ್ಚೆಯ ನಂತರ ಅಧಿಕೃತವಾಗಿ "ಡೋನಟ್" ಅರ್ಥಶಾಸ್ತ್ರದ ಮಾದರಿಯನ್ನು ಅಳವಡಿಸಿಕೊಂಡ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಆಮ್​ಸ್ಟರ್‌ಡ್ಯಾಮ್ ಪಾತ್ರವಾಯಿತು.

ಕೋವಿಡ್-19 ರಿಸ್ಕ್ ಔಟ್‌ಲುಕ್ : ಎ ಪ್ರಿಲಿಮಿನರಿ ಮ್ಯಾಪಿಂಗ್ ಅಂಡ್ ಇಟ್ಸ್​ ಎಫೆಕ್ಟ್​ ' ಎಂಬ ಶೀರ್ಷಿಕೆಯ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಇತ್ತೀಚಿನ ವರದಿಯು ಈ ಸಾಂಕ್ರಾಮಿಕವು ತನ್ನ ಆದ್ಯತೆಗಳನ್ನು ಮರು ಹೊಂದಿಸಲು ಜಗತ್ತಿಗೆ ಹೇಗೆ ಅವಕಾಶವನ್ನು ನೀಡಿದೆ ಎಂಬುದನ್ನು ಸಹ ವಿವರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.