ಪಟಿಯಾಲ: ರಾಜೀವ್ ಗಾಂಧಿ ಅವರಿಗೂ 1984ರ ಸಿಖ್ ವಿರೋಧಿ ದಂಗೆಗೂ ಸಂಬಂಧ ಕಲ್ಪಿಸಿದರೆ, ಪ್ರಧಾನಿ ಮೋದಿಗೂ 2002ರ ಗೋಧ್ರಾ ಹತ್ಯಾಕಾಂಡಕ್ಕೂ ಸಂಬಂಧ ಕಲ್ಪಿಸಬೇಕಾಗುತ್ತೆ ಎಂದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಕಿಡಿ ಕಾರಿದ್ದಾರೆ.
ಸಿಖ್ ವಿರೋಧಿ ದಂಗೆಗೂ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೂ ಸಂಬಂಧವಿದೆ ಎನ್ನುವುದು ತಪ್ಪು. ಇನ್ಮುಂದೆ ಮೋದಿಗೂ, ಗೋದ್ರಾ ಹತ್ಯಾಕಾಂಡಕ್ಕೂ ಸಂಬಂಧ ಕಲ್ಪಿಸಿ ಜನರು ಮಾತಾಡ್ತಾರೆ ಎಂದು ಕುಟುಕಿದರು.
ಯಾರೋ ಕೆಲವರು ದಂಗೆಯಲ್ಲಿ ಪಾಲ್ಗೊಂಡಿದ್ದರು ಎಂದಮಾತ್ರಕ್ಕೆ ರಾಜೀವ್ ಅವರನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ದೂಷಿಸುವುದು ಸರಿಯಲ್ಲ. ದಂಗೆ ನಡೆದಾಗ ಹಲವು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಮೇಲೂ ಎಫ್ಐಆರ್ ದಾಖಲಾಗಿದ್ದನ್ನು ಮೋದಿ ಮರೆಯಬಾರದು.
ತಮ್ಮ ಘಣತೆಯನ್ನು ಬದಿಗೊತ್ತಿ ಮೋದಿ ಇಂತಹ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ. ರಾಜೀವ್ ಹೆಸರು ಹೇಳಿ ಜನರ ಗಮನ ಬೇರೆಡೆಗೆ ತಿರುಗಿಸುತ್ತಿದ್ದಾರೆ. ಸತ್ಯದ ಹೊರತಾಗಿ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದೂ ಹೀಗಳೆದರು.