ETV Bharat / bharat

ಲಾಕ್​ಡೌನ್​​ನಿಂದಾಗಿ ದೇವಸ್ಥಾನ ಬಂದ್​: ಬಾಗಿಲಲ್ಲೇ ನಿಂತು ಹೊಸ ಬಾಳಿಗೆ ಕಾಲಿಟ್ಟ ನವಜೋಡಿ!

ಕಿಲ್ಲರ್​ ಕೊರೊನಾ ಸೃಷ್ಟಿ ಮಾಡಿರುವ ಅವಾಂತರ ಒಂದೆರಡಲ್ಲ. ಇದರ ವಿರುದ್ಧ ಹೋರಾಟ ನಡೆಸಲು ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದ್ದು, ಪರಿಣಾಮ ಹಲವು ತೊಂದರೆ ಉದ್ಭವವಾಗುತ್ತಿದೆ.

Wedding rituals performed at temple's doorstep in Madurai

author img

By

Published : Mar 30, 2020, 6:42 PM IST

ಮಧುರೈ(ತಮಿಳುನಾಡು): ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ದೇಶ ಲಾಕ್​ಡೌನ್​ ಆಗಿದ್ದು, ಇದರಿಂದ ಪ್ರತಿಯೊಬ್ಬರೂ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಲಾಕ್​ಡೌನ್​ ಘೋಷಣೆ ಮಾಡಿದಾಗಿನಿಂದಲೂ ಅನೇಕ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ದೇಶದಲ್ಲಿನ ಎಲ್ಲಾ ದೇವಾಲಯಗಳೂ ಬಂದ್​ ಆಗಿವೆ.

ಕೊರೊನಾ ಭೀತಿ ನಡುವೆ ತಮಿಳುನಾಡಿನ ಮಧುರೈನ ತಿರುಪ್ಪರಂಕುನ್ರಾಮ್ ಮುರುಗನ್​ ದೇವಸ್ಥಾನ ಕೂಡ ಬಂದ್​ ಆಗಿದೆ. ಆದರೆ ದೇವಸ್ಥಾನದ ಬಾಗಿಲಲ್ಲೇ ನಿಂತುಕೊಂಡು ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

Wedding rituals performed at temple's doorstep in Madurai
ಬಾಗಿಲಲ್ಲೇ ಹೊಸ ಬಾಳಿಗೆ ಕಾಲಿಟ್ಟ ನವಜೋಡಿ

ತಮಿಳುನಾಡಿನಲ್ಲಿ ಇಂದು ಒಂದೇ ದಿನ 17 ಕೋವಿಡ್​​-19 ಕೇಸ್​ ಕಂಡು ಬಂದಿದ್ದು, ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಬಂದ್​ ಆಗಿರುವ ದೇವಸ್ಥಾನದ ಎದುರುಗಡೆ ನಿಂತು ಹಾರ ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ಎರಡು ಕುಟುಂಬದ ಸದಸ್ಯರು ಮಾತ್ರ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.