ETV Bharat / bharat

ಮುಂದಿನ 3 ವರ್ಷಗಳಲ್ಲಿ ಭಾರತ ಕನಿಷ್ಠ 2 ವಿಶ್ವಕಪ್​ ಗೆಲ್ಲಬೇಕು: ರೋಹಿತ್​ ಶರ್ಮಾ - ರೋಹಿತ್​​ ಶರ್ಮಾ

ಮುಂದಿನ ಮೂರು ವರ್ಷಗಳಲ್ಲಿ ಭಾರತ ಕನಿಷ್ಠ ಎರಡು ವಿಶ್ವಕಪ್​ ಗೆಲ್ಲಬೇಕು ಎಂದು ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಹೇಳಿದ್ದಾರೆ.

Rohit Sharma
Rohit Sharma
author img

By

Published : May 13, 2020, 9:13 AM IST

ಮುಂಬೈ: ಲಾಕ್​​ಡೌನ್​ನಿಂದಾಗಿ ಕ್ರಿಕೆಟ್​ ಟೂರ್ನಮೆಂಟ್‌ಗಳು ಮುಂದೂಡಿಕೆಯಾಗಿವೆ. ಬಿಡುವಿನ ಸಮಯದಲ್ಲಿ ಕ್ರಿಕೆಟರ್ಸ್​​​​​​ ಮನೆಯಲ್ಲಿದ್ದು ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​​ಮನ್​ ಸುರೇಶ್ ರೈನಾ ಜತೆ ರೋಹಿತ್ ಶರ್ಮಾ ಇನ್​​ಸ್ಟಾಗ್ರಾಮ್​ನಲ್ಲಿ ಮಾತನಾಡಿದ್ದು, ಈ ವೇಳೆ ಮುಂದಿನ ಮೂರು ವರ್ಷಗಳಲ್ಲಿ ಭಾರತಕ್ಕೆ ಕನಿಷ್ಠ ಎರಡು ವಿಶ್ವಕಪ್​ ಗೆಲ್ಲುವ ಅವಕಾಶವಿದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇನ್​​ಸ್ಟಾಗ್ರಾಮ್​​ನಲ್ಲಿ ಮಾತನಾಡಿದ್ದ ಅವರು, ತಮ್ಮ ನಿವೃತ್ತಿ ವಯಸ್ಸು ಬಹಿರಂಗಗೊಳಿಸಿದ್ದರು. 2019ರ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಸಾಧನೆ ಮಾಡಿದ್ದ ಈ ಕ್ರಿಕೆಟಿಗ, ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಎಂದೇ ಪರಿಗಣಿಸಲ್ಪಟ್ಟ 5 ಶತಕದ ಸಾಧನೆ ಮಾಡಿದ್ದರು.

ಮುಂದಿನ ಮೂರು ವರ್ಷದಲ್ಲಿ ಎರಡು ಟಿ-20 ವಿಶ್ವಕಪ್​ ಹಾಗೂ ಒಂದು ಏಕದಿನ ವಿಶ್ವಕಪ್​ ಟೂರ್ನಿ​ ನಡೆಯಲಿದೆ. ಇದರಲ್ಲಿ ಎರಡು ವಿಶ್ವಕಪ್​ ನಾವು ಗೆಲ್ಲಬೇಕು. ಏಕದಿನ ಕ್ರಿಕೆಟ್​​ನಲ್ಲಿ ಮೂರು ಸಲ ದ್ವಿಶತಕ ಬಾರಿಸಿರುವ ಏಕೈಕ ಕ್ರಿಕೆಟರ್​ ರೋಹಿತ್​ ಶರ್ಮಾ, ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್​ ಗಳಿಸಿದ ಆಟಗಾರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.