ನವದೆಹಲಿ: ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುವವರೆಗೂ ಎಲ್ಲರೂ ಎರಡು ಮೀಟರ್ ಅಂತರ (ದೋ ಗಜ್ ಕಿ ದೂರಿ) ಕಾಪಾಡಿಕೊಳ್ಳಬೇಕು ಮತ್ತು ಫೇಸ್ ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ಗಾರ್ ಅಭಿಯಾನ' ಪ್ರಾರಂಭಿಸಿದ ಮಾತನಾಡಿದ ಪ್ರಧಾನಿ ಮೋದಿ, 'ನಾವೆಲ್ಲರೂ ನಮ್ಮ ಸಾಮಾಜಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿದ್ದೇವೆ. ಇಡೀ ಜಗತ್ತೇ ಇದರಿಂದ ಸಮಸ್ಯೆ ಎದುರಿಸದೆ. ಈ ಕಾಯಿಲೆಯಿಂದ ಯಾವಾಗ ಬಿಡುವು ಸಿಗುತ್ತದೆ ಎಂದು ನಮಗೆ ತಿಳಿದಿಲ್ಲ. ಲಸಿಕೆ ಅಭಿವೃದ್ಧಿಪಡಿಸುವ ವರೆಗೂ ಎರಡು ಮೀಟರ್ ಅಂತರ (ದೋ ಗಜ್ ಕಿ ದೂರಿ) ಕಾಪಾಡಿಕೊಳ್ಳಬೇಕು ಮತ್ತು ಫೇಸ್ ಮಾಸ್ಕ್ ಧರಿಸಬೇಕು ಎಂದಿದ್ದಾರೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ ಕೆಲಸದ ಶಕ್ತಿಯನ್ನು ಆಧರಿಸಿದೆ. ಈ ಶಕ್ತಿಯು ಆತ್ಮ ನಿರ್ಭರ ಉತ್ತರ ಪ್ರದೇಶ ರೋಜ್ಗರ್ ಅಭಿಯಾನಕ್ಕೆ ಸ್ಫೂರ್ತಿ ನೀಡಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಂತೆಯೇ ಇತರ ರಾಜ್ಯಗಳು ಸಹ ಈ ರೀತಿಯ ಯೋಜನೆಗಳನ್ನು ತರುತ್ತವೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದರು.
ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಉತ್ತರ ಪ್ರದೇಶ ಧೈರ್ಯ ತೋರಿದೆ. ಸೋಂಕಿನ ವಿರುದ್ಧ ಹೋರಾಡಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತವಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.