ನವದೆಹಲಿ: ಚಂದ್ರಯಾನ-2 ನೌಕೆಯು ಇದುವರೆಗೆ ಯಾರೂ ತಲುಪದ ಸ್ಥಳಕ್ಕೆ ಲ್ಯಾಂಡ್ ಆಗಲಿದೆ. ಲ್ಯಾಂಡಿಂಗ್ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದು, ಇಂದಿನ ರಾತ್ರಿಗೆ ಕಾಯುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಹೇಳಿದ್ದಾರೆ.
ಇಂದು ತಡರಾತ್ರಿ ಚಂದ್ರಯಾನ-2 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನಮ್ಮ ಕೆಲಸವನ್ನು ನಾವು ಚೆನ್ನಾಗಿ ಮಾಡಿದ್ದೇವೆ. ಈಗ ನಾವು ಇಂದು ರಾತ್ರಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಇದೊಂದು ಅಭೂತಪೂರ್ವ ಕ್ಷಣವಾಗಿದ್ದು, ಚಂದ್ರಯಾನ-2ರ ಅಂತಿಮ ಹಂತವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರಲಿದ್ದಾರೆ ಎಂದರು.
-
Behind the scene images of #Chandrayaan2 mission. The final descent of #Chandrayaan2 will take place on the Lunar South Pole, tonight. pic.twitter.com/fjUjNNxgC8
— ANI (@ANI) September 6, 2019 " class="align-text-top noRightClick twitterSection" data="
">Behind the scene images of #Chandrayaan2 mission. The final descent of #Chandrayaan2 will take place on the Lunar South Pole, tonight. pic.twitter.com/fjUjNNxgC8
— ANI (@ANI) September 6, 2019Behind the scene images of #Chandrayaan2 mission. The final descent of #Chandrayaan2 will take place on the Lunar South Pole, tonight. pic.twitter.com/fjUjNNxgC8
— ANI (@ANI) September 6, 2019
ಇನ್ನು ಇಡೀ ಜಗತ್ತೇ ಚಂದ್ರಯಾನ-2 ಲ್ಯಾಂಡಿಂಗ್ ಬಗ್ಗೆ ಕುತೂಹಲದಿಂದ ಕಾಯುತ್ತಿದೆ. ಇಂದು ತಡರಾತ್ರಿ ನೌಕೆಯು ಚಂದ್ರನ ಮೇಲೆ ಇಳಿಯುವ ಕ್ಷಣಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಈ ಸಾಧನೆಯ ಮೂಲಕ ಭಾರತವು ಅಮೆರಿಕಾ, ರಷ್ಯಾ ಹಾಗೂ ಚೀನಾ ದೇಶಗಳ ಸಾಲಿಗೆ ಸೇರಲಿದೆ ಅಂತಾ ಕೆ. ಸಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.