ನವದೆಹಲಿ: ದೆಹಲಿಯ ಗಡಿಭಾಗಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ವಿಚಾರಣೆ ನಡೆಸಿದ ಕೋರ್ಟ್, ಮಾತುಕತೆ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ನಮಗೆ ನಿರಾಸೆಯಾಗಿದೆ ಎಂದು ಹೇಳಿದೆ.
ಯಾವ ಮಾತುಕತೆಗಳು ನಡೆಯುತ್ತಿವೆ ಎಂದು ನಮಗೆ ತಿಳಿದಿಲ್ಲ. ಕೃಷಿ ಕಾನೂನುಗಳನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಬಹುದೇ? ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಒಂದು ಗುಂಪಿನ ಅರ್ಜಿಗಳನ್ನು ಆಲಿಸುತ್ತಿರುವಾಗ ಸಿಜೆಐ ಕೇಂದ್ರ ಸರ್ಕಾರಕ್ಕೆ ಈ ರೀತಿಯಾಗಿ ಪ್ರಶ್ನಿಸಿದೆ.
ಕೇಂದ್ರವು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಡಿಎಂಕೆ ಸಂಸದ ತಿರುಚಿ ಶಿವ, ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಿತು.
ಕೃಷಿ ಕಾನೂನು ಕುರಿತಾಗಿ ಸಮಿತಿ ರಚನೆಗೆ ಸುಪ್ರೀಂ ನಿರ್ದೇಶನ:
ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃದ್ಧರು ಮತ್ತು ಮಹಿಳೆಯರು ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಏನಾಗುತ್ತಿದೆ? ಕೃಷಿ ಕಾನೂನುಗಳು ಉತ್ತಮವೆಂದು ಹೇಳುವ ಒಂದೇ ಒಂದು ಮನವಿಯನ್ನು ಸಹ ಸಲ್ಲಿಸಲಾಗಿಲ್ಲ. ಏನಾದರೂ ತಪ್ಪಾದಲ್ಲಿ ನಾವು ಪ್ರತಿಯೊಬ್ಬರೂ ಜವಾಬ್ದಾರರಾಗಿರುತ್ತೇವೆ ಎಂದು ಸಿಜೆಐ ಎಸ್.ಎ.ಬೊಬ್ಡೆ ಅಭಿಪ್ರಾಯಪಟ್ಟರು.
ಒಂದು ವೇಳೆ ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ತಡೆಯಾಜ್ಞೆ ನೀಡದಿದ್ದರೆ, ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಬೇಕಾಗುತ್ತದೆ. ನ್ಯಾಯಾಲಯವು ಕಾನೂನುಗಳನ್ನು ಅಮಾನತುಗೊಳಿಸಬೇಕೇ ಅಥವಾ ಸರ್ಕಾರವೇ ಅದನ್ನು ಮಾಡುತ್ತದೆಯೇ ಎಂದು ಸಿಜೆಐ ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.
ಕೇಂದ್ರ ಈಗ ಜಾರಿಗೆ ತಂದಿರುವ ಕಾನೂನುಗಳ ಅನುಷ್ಠಾನವನ್ನು ಸದ್ಯಕ್ಕೆ ತಡೆಹಿಡಿಯಬೇಕು. ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸುವಂತೆ ಸಿಜೆಐ ನಿರ್ದೇಶನ ನೀಡಿದ್ದಾರೆ. ರೈತರು ತಮ್ಮ ಕುಂದುಕೊರತೆಗಳನ್ನು ಸಮಿತಿಗೆ ತಿಳಿಸಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆ ವಿರುದ್ಧ ರೈತರ ಹೋರಾಟ: ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಲು ನಿರ್ಧಾರ