ETV Bharat / bharat

ಹೆರಿಗೆ ಆದ್ಮೇಲೆ ಕೊರೊನಾ ಪಾಸಿಟಿವ್​... ತಾಯಿ, ಮಗು ಸೇರಿ ವೈದ್ಯಕೀಯ ಸಿಬ್ಬಂದಿಗೂ ಕ್ವಾರಂಟೈನ್

author img

By

Published : Apr 17, 2020, 10:16 AM IST

ಕೊಲ್ಕತ್ತಾದಲ್ಲಿ ಹೆರಿಗೆಯ ಬಳಿಕ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ತಾಯಿ ಮಗು ಇಬ್ಬರನ್ನೂ ನಗರದ ಎಂ.ಆರ್​ ಬಂಗೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

WB woman tests COVID-19 positive after delivery, labour room and gynae wards shut

ಕೊಲ್ಕತ್ತಾ: ಬಾಣಂತಿಯೊಬ್ಬರಿಗೆ ಕೊರೊನಾ ಪಾಸಿಟಿವ್​ ಕಂಡು ಬಂದಿದ್ದು, ಆಕೆಯನ್ನು ನಗರದ ಎಂ.ಆರ್​ ಬಂಗೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ 12ರಂದು ಮಹಿಳೆ ಹೆರಿಗೆಗೆಂದು ನಗರದ ಎನ್​ಆರ್​ಎಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯ ಬಳಿಕ ಆಕೆಯನ್ನು ಸಮೀಪದ ಲೇಬರ್​ ರೂಂಗೆ ಶಿಫ್ಟ್​ ಮಾಡಲಾಗಿತ್ತು. ಈ ವೇಳೆಯಲ್ಲಿ ಆಕೆಯಲ್ಲಿ ಕೆಮ್ಮು, ಶೀತ ಸೇರಿದಂತೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು,. ವರದಿಯಲ್ಲಿ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ, ತಾಯಿ ಮಗು ಇಬ್ಬರನ್ನು ಕೊರೊನಾಗೆ ಚಿಕಿತ್ಸೆ ನೀಡಲು ನಿಗದಿಪಡಿಸಿದ ಎಂ.ಆರ್ ಬಂಗೂರ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.​

ಮಹಿಳೆ ಸುಮಾರು ಮೂರು ಗಂಟೆಗಳ ಕಾಲ ಲೇಬರ್​ ರೂಂನಲ್ಲಿದ್ದರು ಮತ್ತು ಆ ಸಮಯದಲ್ಲಿ ಇತರ ಆರು ಗರ್ಭಿಣಿಯರು ಆಕೆಯೊಂದಿಗೆ ಸಂಪರ್ಕ ಹೊಂದಿದ್ದರು. ಹೀಗಾಗಿ ಆವರೆಲ್ಲರ ಸ್ಯಾಂಪಲ್ಸ್​ ಗಳನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ಜೊತೆಗೆ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ ವೈದ್ಯರು ಮತ್ತು ನರ್ಸ್​ಗಳನ್ನು ಗುರುತಿಸಲಾಗಿದ್ದು, ಅವರನ್ನೂ ಕ್ವಾರಂಟೈನ್​ನಲ್ಲಿಡಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಣಂತಿಗೆ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಎನ್​ಆರ್​ಎಸ್​ ಆಸ್ಪತ್ರೆಯ ಸ್ರೀ ರೋಗ ವಿಭಾಗ ಮತ್ತು ಲೇಬರ್​ ರೂಂನ್ನು ಮುಚ್ಚಲಾಗಿದೆ. ಅಲ್ಲಿದ್ದ ಎಲ್ಲಾ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಇತರ ಮೂವರಲ್ಲೂ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಅವರನ್ನೂ ಎಂ.ಆರ್​ ಬಂಗೂರ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.