ಜುನಾಗಢ (ಗುಜರಾತ್) : ಭಾರೀ ಮಳೆ ಹಿನ್ನೆಲೆ ಶೆಟ್ರುಂಜಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಸೋಮನಾಥ- ಉನಾ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಜುಲೈ 5 ರಂದು ಪೋರಬಂದರಿನಲ್ಲಿ 10 ಇಂಚು, ಧ್ವಾರಕಾದಲ್ಲಿ 12 ಇಂಚು, ಜುನಾಗಢ ಮತ್ತು ಗಿರ್ ಸೋಮನಾಥ ಜಿಲ್ಲೆಗಳಲ್ಲಿ 5 ರಿಂದ 3 ಇಂಚು ಮಳೆಯಾಗಿದೆ.
ಅಹಮದಾಬಾದ್‌ನ ಭಾರತೀಯ ಹವಾಮಾನ ಕೇಂದ್ರವು ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.