ರುದ್ರಪುರ್(ಉತ್ತರಾಖಂಡ್): ಮಣ್ಣಲ್ಲಿ ಫಲವತ್ತತೆ ಇಲ್ಲ, ಬರಡು ಭೂಮಿ, ಮಳೆ ಆಧಾರಿತ.... ರೈತನ ಬೆಳೆ ನಷ್ಟವಾಗಲು ಮಣ್ಣಲ್ಲಿ ಏನೆಲ್ಲ ಸಮಸ್ಯೆಗಳಿವೆ. ವಿಜ್ಞಾನಿಗಳ ಹೊಸ ಆವಿಷ್ಕಾರದ ಪ್ರಕಾರ ಕೃಷಿಗೆ ಭೂಮಿಯೇ ಬೇಡ.
ಶಾಕ್ ಆದ್ರಾ, ಇದು ಜಲ ಕೃಷಿ. ಇಲ್ಲಿ ಮಣ್ಣು ಅಮುಖ್ಯ. ಇಂಥ ಒಂದು ಪ್ರಯೋಗ ನಡೆದಿರುವುದು ಉತ್ತರಾಖಂಡ್ದ ಪಟ್ನಾಗರ್ನ ಹಲ್ದಿ ಪ್ರದೇಶದಲ್ಲಿ.ಕೃಷಿ ವಿಜ್ಞಾನಿಗಳು ಜಲ ಕೃಷಿ ತಂತ್ರಜ್ಞಾನದ ಮೂಲಕ ಮಣ್ಣಿಲ್ಲದೇ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡಿದ್ದಾರೆ
ಪರ್ವತ ಪ್ರದೇಶದಲ್ಲಿ ಕಂಡು ಬರುವ ಪೈನ್ ಎಲೆಗಳು ಮತ್ತು ತೆಂಗಿನ ಚಿಪ್ಪುಗಳ ಸಹಾಯದಿಂದ ಸ್ಟ್ರಾಬೆರೆ ಬೆಳೆಯಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಗುಡ್ಡುಗಾಡು ಪ್ರದೇಶದಲ್ಲಿರುವ ರೈತರು ಈ ಮೂಲಕ ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ರೈತರು ಈ ರೀತಿ ಬೆಳೆ ಬೆಳೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರಾಖಂಡ್ನಲ್ಲಿ ವಿಜ್ಞಾನಿಗಳು ಈ ಪ್ರಯೋಗ ಮಾಡಿ ಸಕ್ಸಸ್ ಆಗಿದ್ದಾರೆ.
ಏನು ಈ ವಿಧಾನ?
ಈ ವಿಧಾನದಲ್ಲಿ ಸಸ್ಯಗಳಿಗೆ ತೇವಾಂಶವನ್ನು ನೀಡುವ ಪೌಷ್ಠಿಕಾಂಶಗಳನ್ನ ಬೆಳೆ ನಾಟಿ ಮಾಡುವುದಕ್ಕೂ ಮೊದಲೇ ನೀರಿನ ಪೈಪ್ಗಳಿಗೆ ಸೇರಿಸಲಾಗುತ್ತದೆ. ಖನಿಜ ಪೌಷ್ಟಿಕಗಳು ಇದರಲ್ಲಿದ್ದು, ಸಸ್ಯಗಳು ಬೆಳೆಯಲು ಸಹಕಾರಿಯಾಗುತ್ತದೆ. ಹೈಟ್ರೋಪೋನಿಕ್ಸ್ನಿಂದ ಈ ಬೆಳೆಗಳು ಎಲ್ಲ ದ್ರಾವಣಾಂಶಗಳನ್ನು ಪಡೆದುಕೊಳ್ಳುತ್ತವೆ.
ಇನ್ನು ಈ ವಿಧಾನದ ಮೂಲಕ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡ ಇರುತ್ತದೆ. ಇದನ್ನ ಅತಿ ಕಡಿಮೆ ನೀರು ಲಭ್ಯವಾಗುವ ಪ್ರದೇಶಗಳಲ್ಲು ಅಳವಡಿಸಿಕೊಳ್ಳಬಹುದಾಗಿದೆ.