ಲೇಹ್: ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಫಾರ್ವರ್ಡ್ ಬ್ರಿಗೇಡ್ ಸ್ಥಳ ನಿಮು ಎಂಬ ಪ್ರದೇಶಕ್ಕೆ ಆಗಮಿಸಿದ ವೇಳೆ ಸಿಂಧು ದರ್ಶನ ಪೂಜೆ ಮಾಡಿದರು.
ನಿನ್ನೆ ಮೋದಿ ಲಡಾಖ್‌ಗೆ ಅಚ್ಚರಿಯ ಭೇಟಿ ನೀಡಿದ್ದು, ಈ ವೇಳೆ ಸೈನಿಕರ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳನ್ನಾಡುವ ಜೊತೆಗೆ ಚೀನಾಗೆ ಖಡಕ್ ಸಂದೇಶವನ್ನೂ ರವಾನಿಸಿದ್ದರು.
ಪ್ರಧಾನಿ ಅವರೊಂದಿಗೆ ರಕ್ಷಣಾ ಸೇನೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಇದ್ದರು.
ಜನ್‌ಸ್ಕರ್ ಪರ್ವತ ಪ್ರದೇಶಗಳಿಂದ ಆವೃತವಾಗಿರುವ ನಿಮು, ಇಂಡಸ್ ನದಿಯ ದಡದಲ್ಲಿದೆ. ಮೋದಿ ಲೇಹ್‌ಗೆ ಆಗಮಿಸುತ್ತಿದ್ದಂತೆ ಮೊದಲು ಸಿಂಧೂ ದರ್ಶನ ಪೂಜೆ ಮಾಡಿದರು. ಬಳಿಕ ಭಾರತೀಯ ಸೇನಾ ನಾಯಕರನ್ನು ಭೇಟಿಯಾದರು. ಜೊತೆಗೆ ಭೂಸೇನೆ, ವಾಯುಸೇನೆ ಹಾಗು ಐಟಿಬಿಪಿ ಸೇನಾ ನಾಯಕರ ಜೊತೆ ಸಂವಾದ ನಡೆಸಿದರು.