ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ವೊಂದರ ಮುಂದೆ ಪಟಾಕಿ ಚೀಲ ಸ್ಪೋಟಗೊಂಡ ಘಟನೆ ನಡೆದಿದೆ. ಈ ಘಟನೆ ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಪೋಟಗೊಂಡ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೊದಲ ಹಂತದ ತನಿಖೆ ನಡೆದಿದ್ದು, ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಆ ಮೆಡಿಕಲ್ನಲ್ಲಿ ಅಕ್ರಮವಾಗಿ ಪಟಾಕಿ ತುಂಬಿದ್ದ ಚೀಲವಿತ್ತು ಎಂದು ಹೇಳಲಾಗುತ್ತಿದೆ. ನಂತರ ಆ ಪಟಾಕಿ ಸ್ಪೋಟಗೊಂಡು ಈ ಘಟನೆ ನಡೆದಿದೆ. ಆದ್ರೆ, ಈ ಸ್ಫೋಟದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.