ETV Bharat / bharat

ಬಾಂಗ್ಲಾ ಬ್ಯಾಟ್ಸ್​ಮನ್​ಗೆ ಟೀಂ ಇಂಡಿಯಾ ಫಿಸಿಯೋ ಚಿಕಿತ್ಸೆ... ಎಲ್ಲರ ಮನಗೆದ್ದ ಕ್ರೀಡಾ ಸ್ಫೂರ್ತಿ​! - ಟೀಂ ಇಂಡಿಯಾ ಫಿಸಿಯೋ ಚಿಕಿತ್ಸೆ

ಬಾಂಗ್ಲಾ ವಿರುದ್ಧದ ಎರಡನೇ ಐತಿಹಾಸಿಕ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಫಿಸಿಯೋ ಕ್ರೀಡಾ ಸ್ಫೂರ್ತಿ ಮೆರೆದಿದ್ದು, ಇದೀಗ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಟೀಂ ಇಂಡಿಯಾ ಕ್ರೀಡಾ ಸ್ಫೂರ್ತಿ
author img

By

Published : Nov 23, 2019, 4:10 AM IST

ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್​​ ಕ್ರಿಕೆಟ್​​ ಪಂದ್ಯ ನಡೆಯುತ್ತಿದ್ದು, ಮೊದಲ ದಿನ ಟೀಂ ಇಂಡಿಯಾ ಮೆಲುಗೈ ಸಾಧಿಸಿದೆ.

ಇದರ ಮಧ್ಯೆ ಬಾಂಗ್ಲಾದೇಶದ ಬ್ಯಾಟ್ಸ್​​ಮನ್​ ನಯೀಮ್ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಅವರ ಹೆಲ್ಮೆಟ್​​​ಗೆ ಚೆಂಡು ತಗುಲಿದ್ದರಿಂದ ತಕ್ಷಣವೇ ಮೈದಾನದಲ್ಲಿ ಬಿದ್ದಿದ್ದಾರೆ. ಈ ವೇಳೆ ಟೀಂ ಇಂಡಿಯಾ ಫಿಸಿಯೋ ನಿತಿನ್​ ಪಟೇಲ್​ ಮೈದಾನಕ್ಕೆ ಓಡಿ ಬಂದು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಕಾರ್ಯಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಂದ್ಯ ನಡೆಯುತ್ತಿದ್ದ ವೇಳೆ ಬಾಂಗ್ಲಾ ಬ್ಯಾಟ್ಸ್​ಮನ್​​​ ಲಿಟನ್​ ದಾಸ್​ ಹೆಲ್ಮೆಟ್​ಗೆ ಚೆಂಡು ಬಡಿದ ಕಾರಣ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಮೈದಾನಕ್ಕೆ ಬಂದ ಬಾಂಗ್ಲಾ ಫಿಸಿಯೋ ತಕ್ಷಣವೇ ಅವರನ್ನ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಮತ್ತೊಬ್ಬ ಆಟಗಾರ ಗಾಯಗೊಂಡ ಕಾರಣ ತಕ್ಷಣವೇ ವಿರಾಟ್​ ಕೊಹ್ಲಿ ಮನವಿ ಮಾಡುತ್ತಿದ್ದಂತೆ ಟೀಂ ಇಂಡಿಯಾ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.

ಕ್ರೀಡಾಸ್ಫೂರ್ತಿಯಿಂದ ನಿತಿನ್​ ಪಟೇಲ್​ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟರ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಬಾಂಗ್ಲಾ ಪ್ಲೇಯರ್ಸ್​ಗಳನ್ನ ಭೇಟಿಯಾದ ಪ್ರಧಾನಿ ಶೇಖ್​ ಹಸೀನಾ ಆರೋಗ್ಯ ವಿಚಾರಿಸಿದರು.

ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್​​ ಪಂದ್ಯದಲ್ಲಿ ಈಗಾಗಲೇ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಬ್ಯಾಟಿಂಗ್​ ನಡೆಸುತ್ತಿರುವ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

Intro:Body:

ಬಾಂಗ್ಲಾ ಬ್ಯಾಟ್ಸ್​ಮನ್​ಗೆ ಟೀಂ ಇಂಡಿಯಾ ಫಿಸಿಯೋ ಚಿಕಿತ್ಸೆ... ಟ್ವಿಟರ್​​ನಲ್ಲಿ ಎಲ್ಲರ ಮನಗೆದ್ದ ಕ್ರೀಡಾ ಸ್ಫೂರ್ತಿ​! 

ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್​​ ಕ್ರಿಕೆಟ್​​ ಪಂದ್ಯ ನಡೆಯುತ್ತಿದ್ದು, ಮೊದಲ ದಿನ ಟೀಂ ಇಂಡಿಯಾ ಮೆಲುಗೈ ಸಾಧಿಸಿದೆ. 

ಇದರ ಮಧ್ಯೆ ಬಾಂಗ್ಲಾದೇಶದ ಬ್ಯಾಟ್ಸ್​​ಮನ್​ ನಯೀಮ್ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಅವರ ಹೆಲ್ಮೆಟ್​​​ಗೆ ಚೆಂಡು ತಗುಲಿದ್ದರಿಂದ ತಕ್ಷಣವೇ ಮೈದಾನದಲ್ಲಿ ಬಿದ್ದಿದ್ದಾರೆ. ಈ ವೇಳೆ ಟೀಂ ಇಂಡಿಯಾ ಫಿಸಿಯೋ ನಿತಿನ್​ ಪಟೇಲ್​ ಮೈದಾನಕ್ಕೆ ಓಡಿ ಬಂದು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಕಾರ್ಯಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಪಂದ್ಯ ನಡೆಯುತ್ತಿದ್ದ ವೇಳೆ ಬಾಂಗ್ಲಾ ಬ್ಯಾಟ್ಸ್​ಮನ್​ಗಳಾದ ಲಿಟನ್​ ದಾಸ್​ ಹೆಲ್ಮೆಟ್​ಗೆ ಚೆಂಡು ಬಡಿದ ಕಾರಣ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಮೈದಾನಕ್ಕೆ ಬಂದ ಬಾಂಗ್ಲಾ ಫಿಸಿಯೋ ತಕ್ಷಣವೇ ಅವರನ್ನ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಮತ್ತೊಬ್ಬ ಆಟಗಾರ ಗಾಯಗೊಂಡ ಕಾರಣ ತಕ್ಷಣವೇ ವಿರಾಟ್​ ಕೊಹ್ಲಿ ಮನವಿ ಮಾಡುತ್ತಿದ್ದಂತೆ ಟೀಂ ಇಂಡಿಯಾ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.

ಕ್ರೀಡಾಸ್ಫೂರ್ತಿಯಿಂದ ನಿತಿನ್​ ಪಟೇಲ್​ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ಟ್ವೀಟರ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್​​ ಪಂದ್ಯದಲ್ಲಿ ಈಗಾಗಲೇ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಬ್ಯಾಟಿಂಗ್​ ನಡೆಸುತ್ತಿರುವ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.