ETV Bharat / bharat

ಅಣೆಕಟ್ಟೆ ಬಳಿ ಸಿಲುಕಿದ್ದ ವ್ಯಕ್ತಿ:  ಹೆಲಿಕಾಪ್ಟರ್​ ಮೂಲಕ ರಕ್ಷಣೆ - Khutaghat Dam

ಬಿಲಾಸ್​ಪುರದ ರತನ್​​ಪುರ ಪ್ರದೇಶದಲ್ಲಿ ಇರುವ ಖುತಘಾಟ್ ಅಣೆಕಟ್ಟಿನ ಭಾರಿ ಹರಿವಿನಿಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಐಎಎಫ್​ ಹೆಲಿಕಾಪ್ಟರ್​ ಮೂಲಕ ರಕ್ಷಿಸಲಾಗಿದೆ.

IAF rescues stranded man
ಸಿಕ್ಕಿಬಿದ್ದ ವ್ಯಕ್ತಿಯನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ
author img

By

Published : Aug 17, 2020, 2:26 PM IST

ಬಿಲಾಸ್​ಪುರ (ಛತ್ತೀಸ್​ಗಡ): ಇಲ್ಲಿನ ರತನ್​​ಪುರ ಪ್ರದೇಶ ಖುತಘಾಟ್ ಅಣೆಕಟ್ಟಿನ ಭಾರಿ ಹರಿವಿನಲ್ಲಿ ಗಂಟೆಗಳ ಕಾಲ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಭಾರತೀಯ ವಾಯುಪಡೆ (ಐಎಎಫ್​​​) ಹೆಲಿಕಾಪ್ಟರ್​ ಮೂಲಕ ಸೋಮವಾರ ಯಶಸ್ವಿಯಾಗಿ ರಕ್ಷಿಸಿದೆ.

ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ

ಆಗಸ್ಟ್​​ 16ರಂದು ಅಣೆಕಟ್ಟಿಯ ಹರಿವಿಗೆ ಧುಮುಕಿದ್ದ ವ್ಯಕ್ತಿ, ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅಲ್ಲಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ರಕ್ಷಣೆಗಾಗಿ ಹರಸಾಹಸ ಪಟ್ಟಿದ್ದರು. ಕೊನೆಗೆ ಅಲ್ಲಿಯೇ ಮರವನ್ನು ಹಿಡಿದು ಅಣೆಕಟ್ಟಿನ ಬಳಿಯ ಕಲ್ಲಿನ ಮೇಲೆ ಕುಳಿತಕೊಂಡು ಜೀವ ಉಳಿಸಿಕೊಂಡಿದ್ದರು. ವಿಷಯ ತಿಳಿದು ಐಎಎಫ್​ ತಂಡ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಹೆಲಿಕಾಪ್ಟರ್​ ಮಿ-17ನಿಂದ ಹಗ್ಗಗಳನ್ನು ಬಳಸಿ ಕಾಪಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.