ಶ್ರೀನಗರ: ಇಲ್ಲಿನ ಬಂಡಿಪೋರಾದ ಬಿಜೆಪಿ ನಾಯಕ ವಾಸಿಂ ಬ್ಯಾರಿ ಮತ್ತು ಆತನ ಕುಟುಂಬ ಸದಸ್ಯರ ಹತ್ಯೆಗೆ ಲಷ್ಕರ್–ಇ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರು ಪೂರ್ವಯೋಜಿತ ದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ್ ರೇಂಜ್ನ ಐಜಿಪಿ ವಿಜಯ್ ಕುಮಾರ್ ಗುರುವಾರ ಹೇಳಿದರು.
ಹತ್ಯೆಗೀಡಾದ ನಾಯಕನ ರಕ್ಷಣೆಗಾಗಿ ನಿಯೋಜಿಸಲಾದ 10 ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್ಒ) ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಐಜಿಪಿ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಈ ಹೇಳಿಕೆ ನೀಡಿದ್ದಾರೆ.
ವಾಸಿಂ ಬಾರಿ, ಅವರ ತಂದೆ ಬಹಿರ್ ಅಹ್ಮದ್ ಬಾರಿ ಮತ್ತು ಸೋದರ ಉಮರ್ ಬಾರಿ ಅವರು ಕೊಲೆಯಾಗಿದ್ದಾರೆ. ಬಿಜೆಪಿ ನಾಯಕನ ಮನೆಯ ಎದುರಿಗೆ ಇರುವ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಐಜಿಪಿ ನೇತೃತ್ವದ ಪೊಲೀಸ್ ತಂಡವು ಪರಿಶೀಲಿಸಿತು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ. ಒಬ್ಬರು ಸ್ಥಳೀಯರಾಗಿದ್ದು, ಅವರನ್ನು ಅಬಿದ್ ಹಕ್ಕಾನಿ ಮತ್ತು ಇನ್ನೊಬ್ಬರು ವಿದೇಶಿಯರು ಎಂದು ಗುರುತಿಸಲಾಗಿದೆ. ಅಬಿದ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರೆ, ಮತ್ತೊಬ್ಬ ಸೂಚನೆ ನೀಡುತ್ತಿದ್ದ. ಇಬ್ಬರನ್ನೂ ಕೂಡಲೇ ಬಂದಿಸಲಾಗುವುದು ಎಂದು ಕುಮಾರ್ ಹೇಳಿದರು.