ಹೈದರಾಬಾದ್: ಜಾಗತಿಕ ಮಟ್ಟವನ್ನೇ ಹುಟ್ಟಡಗಿಸಿರುವ ಕೋವಿಡ್-19 ಅನ್ನು ಹಿಡಿತಕ್ಕೆ ತರಲು ಇಡೀ ಜಗತ್ತೇ ನಾನಾ ಕಸರತ್ತು ನಡೆಸುತ್ತಿದೆ. ಆದರೆ, ಚೀನಾ, ದಕ್ಷಿಣ ಕೊರಿಯಾ ಮಾತ್ರ ಮಹಾಮಾರಿಯನ್ನು ದೇಶದಿಂದ ಹೊರಹಾಕಲೇಬೇಕು ಎಂದು ಅತ್ಯಾಧುನಿಕ ತಂತ್ರಜ್ಞಾನದ ಲೋಕವನ್ನೇ ಬಳಸುತ್ತಿವೆ. ಹೀಗಾಗಿ ಎರಡೂ ದೇಶಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಮೂಲಕ ವಿಶ್ವಕ್ಕೇ ಉತ್ತಮ ಉದಾಹರಣೆಯಾಗಿ ಹೊರಹೊಮ್ಮಿವೆ.
ಸಿಂಗಾಪುರ ಸನ್ನದ್ಧತೆ
ಕೊರೊನಾ ಪಿಡುಗು ವಿರುದ್ಧ ಚೀನಾ ದೊಡ್ಡ ಪ್ರಮಾಣದಲ್ಲಿ ಯುದ್ಧವೇ ನಡೆಸಿತು. ಯಕಶ್ಚಿತ್ ವೈರಸ್ ವಿರುದ್ಧ ಹೋರಾಡಲು ತಂತ್ರಜ್ಞಾನ, ವೈದ್ಯಕೀಯ ತಂಡಗಳು ಹಾಗೂ ಎಲ್ಲಾ ರೀತಿಯ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ. ಅದರಂತೆಯೇ ಸಿಂಗಾಪುರ ಸಹ ಸನ್ನದ್ಧವಾಗಿದೆ. ಸುರಕ್ಷಿತ ಕಾರ್ಯಾಚರಣೆಗಳನ್ನು ನಡೆಸಿ, ಸಾವಿಗೆ ನಿರ್ಬಂಧ ವಿಧಿಸುತ್ತಿದೆ. ಅಲ್ಲದೇ ಶಂಕಿತರಿಗೆ ವೇಗವಾಗಿ ತಪಾಸಣೆ ನಡೆಸಲು ದಕ್ಷಿಣ ಕೊರಿಯಾ ನೂತನ ಮಾನದಂಡಗಳನ್ನು ರೂಪಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಇಷ್ಟೆಲ್ಲ ಪ್ರಯತ್ನಿಸುತ್ತಿರುವ ಈ ದೇಶಗಳ ಶ್ರಮ ಬೇರೆ ದೇಶಗಳಿಗೆ ಮಾದರಿಯಾಗಿವೆ.
ಚೀನಾಕ್ಕೆ ತಾಂತ್ರಿಕತೆ ಬಲ
ಕೊರೊನಾ ವೈರಸ್ ಅನ್ನು ದೇಶದಿಂದ ಹೊರಹಾಕಲು ಚೀನಾದಲ್ಲಿ ತಜ್ಞರು ಮತ್ತು ವೈದ್ಯರು ಗಡಿಯಾರದ ಮುಳ್ಳಿನ ಜೊತೆ ಓಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ವೇಗವಾಗಿ ಕಾರ್ಯನಿರ್ವಸುತ್ತಿದ್ದಾರೆ. ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ರೋಬೋಟ್, ಅಪ್ಲಿಕೇಶನ್‌ಗಳು, ಡ್ರೋನ್, ಹೊಸ ತಂತ್ರಜ್ಞಾನ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳ ತಂತ್ರಜ್ಞಾನ ಬಳಸುತ್ತಿದ್ದಾರೆ.
ಆ್ಯಪ್ ಮೂಲಕ ಸುರಕ್ಷತಾ ಸಲಹೆ
ಚೀನಾದ ಹಂಗ್ಜೋಂಗ್ನಲ್ಲಿರುವ ಜನಪ್ರಿಯ ಇ-ಕಾಮರ್ಸ್ ಕಂಪನಿಯು ಕೊರೊನಾ ವೈರಸ್ ಸೋಂಕು ಕುರಿತು ಪ್ರಸಿದ್ಧ 200 ನಗರಗಳಿಗೆ ತನ್ನ ಆ್ಯಪ್ ಮೂಲಕ ಮಾಹಿತಿ ನೀಡಿದೆ. ಈ ಆ್ಯಪ್ ಅನ್ನು 20 ಕೋಟಿ ಜನರು ಉಪಯೋಗಿಸುತ್ತಿದ್ದಾರೆ. ಆ್ಯಪ್ನಲ್ಲಿ ಸುರಕ್ಷತೆ, ಸೋಂಕಿತ ಮತ್ತು ಸೋಂಕಿತವಲ್ಲದ ಪ್ರದೇಶಗಳಿಗೆ ಸಂಬಂಧಿಸಿದಂತೆ ಹಸಿರು ಬಣ್ಣದಲ್ಲಿ ನಕ್ಷೆಯ ಮೂಲಕ ತಿಳಿಸಿದೆ. ಈ ಪ್ರದೇಶಗಳಲ್ಲಿ ಯಾವುದೇ ಭಯವಿಲ್ಲದೆ ಓಡಾಡಬಹುದು. ಪೀಡಿತ ಪ್ರದೇಶ, ಸೋಂಕು ಶಂಕೆ ಕಂಡು ಬಂದ ಪ್ರದೇಶಗಳಿಗೆ ಹಳದಿ ಬಣ್ಣ ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಕನಿಷ್ಠ ಒಂದು ವಾರ ಎಲ್ಲಿಯೂ ತಿರುಗಾಡುವಂತಿಲ್ಲ ಎಂದು ಸೂಚಿಸಿದೆ.
ಕೋವಿಡ್-19 ಆ್ಯಪ್ ಅನ್ನು ಚೀನಾ ಸರ್ಕಾರ ಪರಿಚಯಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆಗಳನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ ವೈರಸ್ ಪೀಡಿತರು, ಶಂಕಿತರ ಮಾಹಿತಿಯನ್ನು ಆ್ಯಪ್ ಒಳಗೊಂಡಿರುತ್ತದೆ. ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಯಾಣ ಬೆಳೆಸಿದ್ದರೆ ಆತನ ವಿವರ, ನಗರ, ಬಳಸಿದ ಸಾರಿಗೆ, ಮಾರ್ಗಗಳನ್ನು ಈ ಆ್ಯಪ್ ಸಂಗ್ರಹಿಸುತ್ತದೆ.
ವೈರಸ್ ವ್ಯಾಪಕವಾಗಿ ಹರಡಬಾರದು ಎಂಬ ಉದ್ದೇಶದಿಂದ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಯಿತು. ಅಲ್ಲದೇ ಪಠ್ಯ ಹಿಂದೆ ಉಳಿಯಬಾರದು ಮತ್ತು ಮಕ್ಕಳಿಗೆ ಶಿಕ್ಷಣ ಕಾಲಕ್ಕೆ ತಕ್ಕಂತೆ ದೊರೆಯಬೇಕು ಎಂದು ಚೀನಾ ಸರ್ಕಾರದ ಆದೇಶದ ಮೂಲಕ ವಿದ್ಯಾರ್ಥಿಗಳಿಗೆ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಂದಲೇ ಪಾಠ ಪ್ರವಚನ ಮಾಡಲಾಗುತ್ತಿದೆ.
ಇ-ಕಾಮರ್ಸ್ ಸಹಕಾರ ಹೀಗಿದೆ?
ಫುಡ್ ಡಿಲಿವರಿ (ಆಹಾರ ವಿತರಣಾ) ಆ್ಯಪ್ಗಳು ಮತ್ತು ಆಲಿಬಾಬಾದಂತಹ ಇ-ಕಾಮರ್ಸ್ ದೈತ್ಯ ಕಂಪನಿಗಳು ಚಾಲಕ ರಹಿತ ವಾಹನಗಳ ಮೂಲಕ ಗ್ರಾಹಕರಿಗೆ ಆಹಾರ ತಲುಪಿಸುತ್ತಿದ್ದವು. ಅಷ್ಟೇ ಅಲ್ಲದೆ, ಆಸ್ಪತ್ರೆಗಳು ಮತ್ತು ನಿರ್ಬಂಧಿತ ಪ್ರದೇಶಗಳಿಗೂ (ಕೊರೊನಾ ಪೀಡಿತರು) ಸರಕು ಮತ್ತು ಆಹಾರವನ್ನು ತಲುಪಿಸಲಾಗುತ್ತಿತ್ತು.
ಕಮ್ಯುನಿಸ್ಟ್ ಕಾರ್ಯಕರ್ತರಿಂದ ಮನೆಮನೆಗೂ ಆಹಾರ:
ಚೀನಾದ ಕಮ್ಯುನಿಸ್ಟ್ ಪಕ್ಷ ಶತಕೋಟಿ ಸದಸ್ಯರನ್ನು ಹೊಂದಿದೆ. ಕೊರೊನಾ ಹಾವಳಿಗೆ ವುಹಾನ್ನಲ್ಲಿರುವ 1.20 ಕೋಟಿ ಜನರು ಮನೆ ಬಿಟ್ಟು ಹೊರಬಾರದ ಪರಿಸ್ಥಿತಿಗೆ ಬಂತು. ಆಗ ಪಕ್ಷದ ಕಾರ್ಯಕರ್ತರು ಮನೆಮನೆಗೂ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ಜ್ವರವಿದ್ದರೆ ಹೆಲ್ಮೆಟ್ ಎಚ್ಚರಿಸುತ್ತೆ!
ಬೀಜಿಂಗ್ ಮೂಲದ ಕಂಪನಿಯೊಂದು ಜನಸಂದಣಿ ಪ್ರದೇಶಗಳ ತಾಪಮಾನ ವರದಿಗೆ ಕೃತಕ ಬುದ್ಧಿಮತ್ತೆ ಬಳಸುತ್ತಿದೆ. ಕಚೇರಿಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಬಳಸದ ಜನರ ಕುರಿತು ಮಾಹಿತಿ ನೀಡುವಂತೆ ಎರಡು ಕಂಪನಿಗಳು ಪೊಲೀಸರಿಗೆ ಸೂಚಿಸಿವೆ. ವೈರಸ್ ಕುರಿತು ಮಾಹಿತಿ ನೀಡಲು ಧ್ವನಿವರ್ಧಕಗಳನ್ನು ಅಳವಡಿಸಿರುವ ಡ್ರೋನ್ಗಳನ್ನು ಬಳಕೆ ಮಾಡಲಾಗುತ್ತಿದೆ.
ವ್ಯಕ್ತಿಯ ಮುಖ ಗುರುತಿಸುವಿಕೆ ಸಲುವಾಗಿ ರೋಬೋಟ್, ಸ್ಮಾರ್ಟ್ ಹೆಲ್ಮೆಟ್, ಡ್ರೋನ್‌ಗಳಿಗೆ ಅತ್ಯಾಧುನಿಕ ಸಾಫ್ಟ್‌ವೇರ್ ಹೊಂದಿರುವ ಥರ್ಮಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾರಿಗಾದರೂ ಜ್ವರ ಕಂಡು ಬಂದರೆ ಸ್ಮಾರ್ಟ್ ಹೆಲ್ಮೆಟ್ ಧರಿಸಿದ ಸವಾರರಿಗೆ ಎಚ್ಚರ ನೀಡುತ್ತದೆ.
ಆಸಕ್ತಿದಾಯಕ ತಂತ್ರಗಳು: ಸಿಂಗಾಪುರ ಹೆಚ್ಚು ಸೋಂಕುಗಳನ್ನು ಹೊಂದಿರುವ ತಗುಲಿದ ದೇಶವಾಗಿದೆ. ಇಲ್ಲಿಗೆ ವಿಶ್ವದಾದ್ಯಂತ 100ಕ್ಕೂ ಹೆಚ್ಚು ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಾರೆ. ವೈರಸ್ ನಿಯಂತ್ರಿಸಲು ಇಲ್ಲಿನ ಸರ್ಕಾರ ಅನುಸರಿಸಿದ ತಂತ್ರಗಳು ಹೆಚ್ಚು ಆಸಕ್ತಿದಾಯಕವಾಗಿದೆ. ಇಲ್ಲಿ ವುಹಾನ್ ಮೂಲದ ವೃದ್ಧೆಯೊಬ್ಬರಿಗೆ (66) ಸೋಂಕು ತಗುಲಿದೆಯೆಂದು ಜನವರಿ 23 ರಂದು ಪತ್ತೆಯಾದ ಕೆಲವೇ ದಿನಗಳಲ್ಲಿ ಸರ್ಕಾರ, ಅದನ್ನು ಕಾರ್ಯರೂಪಕ್ಕೆ ಬಂದಿತು.
ವೈರಸ್ನಿಂದ ವೃದ್ಧ ಮೃತಪಡುತ್ತಿದ್ದಂತೆ ಸರ್ಕಾರ ಆರೆಂಜ್ ಅಲರ್ಟ್ ಘೋಷಿಸಿತು. ವೈರಸ್ ಹರಡುವುದನ್ನು ತಪ್ಪಿಸಲು ಶಾಲಾ-ಕಾಲೇಜುಗಳು, ಸಭೆ-ಸಮಾರಂಭಗಳು, ಔತಣಕೂಟ, ಬೃಹತ್ ಕೂಟಗಳು ಮತ್ತು ಚೀನೀ ಹೊಸ ವರ್ಷದ ಆಚರಣೆಗಳನ್ನು ಸ್ಥಗಿತಗೊಳಿಸಿತು.
ಸರ್ಕಾರ ತನ್ನದೇ ಆದ ಸಾರ್ವಜನಿಕ ವ್ಯಾಟ್ಸ್ಆ್ಯಪ್ ಗುಂಪುಗಳನ್ನು ರಚಿಸಿತು. ವದಂತಿಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಕೆ ನೀಡಿತು. ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿತು. ಚೀನಾದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಲಾಯಿತು. ವಾಯು, ನೌಕಾ ಮತ್ತು ರಸ್ತೆ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. ದೂರವಾಣಿಗಳ ಮೂಲಕ ಸಲಹೆ ನೀಡಲಾಯಿತು.
ಐದು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಕೊರಿಯಾದಲ್ಲಿ 8,000 ಮಂದಿಗೆ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾದವು. ಅದರಲ್ಲಿ 67 ಮಂದಿ ಬಲಿಯಾಗಿದ್ದಾರೆ. ಜಾಗತಿಕ ಮರಣದ ಪ್ರಮಾಣವು ಶೇ.3.4ರಷ್ಟಿದೆ. ದಕ್ಷಿಣ ಕೊರಿಯಾ ಶೇ.1 ಪ್ರತಿಶತಕ್ಕಿಂತಲೂ ಕಡಿಮೆ ಇದೆ.
ಪೀಡಿತರು ಪತ್ತೆಯಾದ 6 ಗಂಟೆಯಲ್ಲಿ ಚಿಕಿತ್ಸೆ ದಕ್ಷಿಣ ಕೊರಿಯಾ ಪ್ರಾರಂಭಿಸಿತು. ಪ್ರತಿದಿನ 20,000 ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ದೇಶಾದ್ಯಂತ ಸಾರ್ವಜನಿಕ, ಖಾಸಗಿ ಪ್ರಯೋಗಾಲಯಗಳನ್ನು 24/7 ಸೇವೆ ಸಲ್ಲಿಸುವಂತೆ ಮಾಡಲಾಯಿತು. ವಾರಕ್ಕೆ 1,40,000 ರಕ್ತದ ಮಾದರಿ ಪರೀಕ್ಷಿಸಲು ಪರೀಕ್ಷಾ ಕಿಟ್‌ಗಳು ಲಭ್ಯವಿದ್ದವು. ಶೇ.98ರಷ್ಟು ನಿಖರತೆಯೊಂದಿಗೆ ವೈರಸ್ ಪತ್ತೆ ಹಚ್ಚಲು ತಂತ್ರಜ್ಞಾನ ಹೊಂದಿತ್ತು.