ಲಖನೌ: ವಿಶ್ವ ಸಿಂಧಿ ಸೇವಾ ಸಂಗಮ್ ಪರಿವಾರವು 200 ಬೆಳ್ಳಿ ಕಲ್ಲುಗಳನ್ನು ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಲು ಮುಂದಾಗಿದೆ. ಈ ಕಲ್ಲುಗಳನ್ನು ಜನವರಿ 26 ರಂದು ಅಯೋಧ್ಯೆಯ ರಾಮ್‌ಲಲ್ಲಾ ಅವರ ಪಾದಕ್ಕೆ ಹಸ್ತಾಂತರಿಸಲಾಗುತ್ತದೆ.
![ram-mandir](https://etvbharatimages.akamaized.net/etvbharat/prod-images/up-luc-04-sindhisamaj-religious-10177_26012021011902_2601f_1611604142_72.jpg)
ಉತ್ತರ ಸಿಂಧಿ ಸೇವಾ ಸಂಗಮ್ ಪರಿವಾರದ ಪರವಾಗಿ, ಉತ್ತರ ಪ್ರದೇಶದ ಕೆ.ಬಿ. ಅರಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ, ಸಂಗಮ್ ಪರಿವಾರವು 200 ಬೆಳ್ಳಿ ಕಲ್ಲುಗಳನ್ನು ಅಯೋಧ್ಯೆಗೆ ರಾಮನ ಸೇವೆಯಲ್ಲಿ ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯ ಸರ್ಕಾರದ ಜಲಶಕ್ತಿ ಸಚಿವ ಡಾ.ಮಹೇಂದ್ರ ಸಿಂಗ್ ಮತ್ತು ಉತ್ತರ ಪ್ರದೇಶ ಸಿಂಧಿ ಅಕಾಡೆಮಿಯ ಉಪಾಧ್ಯಕ್ಷ ನಾನಕ್ ಚಂದ್ ಲಖಾನಿ ಭಾಗವಹಿಸಿದ್ದರು.