ETV Bharat / bharat

ವಿಶಾಖಪಟ್ಟಣಂ: ಎಟಿಎಂನಲ್ಲಿ ಹಾವು ಕಂಡು ಗ್ರಾಹಕ ಕಕ್ಕಾಬಿಕ್ಕಿ! - snake in SBI ATM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಹಾವು ಕಾಣಿಸಿಕೊಂಡಿದೆ. ಹಣ ಬಿಡಿಸಿಕೊಳ್ಳಲು ಬಂದು ಹಾವನ್ನು ನೋಡಿದ ಗ್ರಾಹಕ ಗಾಬರಿಯಿಂದ ಓಡಿರುವ ಘಟನೆ ನಡೆದಿದೆ.

Visakhapatnam: snake found in SBI ATM
ವಿಶಾಖಪಟ್ಟಣಂ: ಎಸ್‌ಬಿಐ ಎಟಿಎಂನಲ್ಲಿ ಹಾವು ಕಂಡು ಗ್ರಾಹಕ ಪರಾರಿ
author img

By

Published : Aug 30, 2020, 9:41 AM IST

Updated : Aug 30, 2020, 10:28 AM IST

ವಿಶಾಖಪಟ್ಟಣಂ(ಆಂದ್ರ ಪ್ರದೇಶ): ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಬೃಹತ್​ ಗಾತ್ರದ ಹಾವು ಕಾಣಿಸಿಕೊಂಡಿದೆ. ಹಣ ಬಿಡಿಸಿಕೊಳ್ಳಲು ಎಟಿಎಂಗೆ ಬಂದಿದ್ದ ಗ್ರಾಹಕನೋರ್ವ ಹಾವನ್ನು ಕಂಡು ಗಾಬರಿಯಿಂದ ಓಡಿದ್ದಾನೆ.

ಸುಮಾರು 5 ಅಡಿ ಉದ್ದವಿರುವ ಹಾವು ಎಟಿಎಂ ಪ್ರವೇಶಿಸಿ ಮೂಲೆಯಲ್ಲಿ ಸುತ್ತಿಕೊಂಡು ಮಲಗಿತ್ತು. ಈ ವೇಳೆ ಹಣ ಬಿಡಿಸಲು ಬಂದ ಗ್ರಾಹಕರೊಬ್ಬರು ಇದನ್ನು ಗಮನಿಸಿ ಭಯದಿಂದ ಓಡಿಹೋದರು. ಆನಂತರ ವಿಚಾರ ತಿಳಿದ ಕಲೆಕ್ಟರ್​ ಕಚೇರಿ ಸಿಬ್ಬಂದಿಯು ಉರಗ ತಜ್ಞನಿಗೆ ಮಾಹಿತಿ ನೀಡಿದ್ದಾರೆ.

ವಿಶಾಖಪಟ್ಟಣಂ: ಎಸ್‌ಬಿಐ ಎಟಿಎಂನಲ್ಲಿ ಹಾವು ಕಂಡು ಗ್ರಾಹಕ ಪರಾರಿ

ಸ್ಥಳಕ್ಕಾಗಮಿಸಿದ ಉರಗ ತಜ್ಞ ಸುಬ್ರಮಣ್ಯಂ ಎಟಿಎಂಗೆ ಹೋಗಿ ಹಾವನ್ನು ಹಿಡಿದು ಊರಾಚೆ ಬಿಟ್ಟಿದ್ದಾರೆ.

Last Updated : Aug 30, 2020, 10:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.