ETV Bharat / bharat

ವಿಶೇಷ ಲೇಖನ: ಕೋವಿಡ್ -19 ವೈರಸ್​​​​​​​​‌ ದೇಹದಲ್ಲಿ198 ಬದಲಾವಣೆಗಳನ್ನು ಮಾಡುತ್ತದೆ! - corona virus news

ಮಾನವನ ದೇಹದಲ್ಲಿ ವೈರಸ್ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿಜ್ಞಾನಿಗಳು ಗಮನಾರ್ಹ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ, ದೇಹದಲ್ಲಿ 198 ಬದಲಾವಣೆಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

corona
ಕೊರೊನಾ
author img

By

Published : May 8, 2020, 1:54 PM IST

ಲಂಡನ್: ಕೋವಿಡ್ -19ಗೆ ಕಾರಣವಾಗುವ ಸಾರ್ಸ್ ಕೋವ್- II ಜೀನ್‌ಗಳು, ಅಂದರೆ ಕೊರೊನಾ ವೈರಸ್, ಅಲ್ಪಾವಧಿಯಲ್ಲಿಯೇ ಅನೇಕ ಬದಲಾವಣೆಗಳನ್ನು ಮಾಡುವಲ್ಲಿ ಸಕ್ರಿಯವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸಾರ್ಸ್ ಕೋವ್- II ಈ ಜೀನ್‌ಗಳಲ್ಲಿ 198 ಬದಲಾವಣೆಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ವಿಜ್ಞಾನಿಗಳು ಈ ಸಂಬಂಧ 7,500 ಜನರ ಮೇಲೆ ವೈಜ್ಞಾನಿಕ ಸಂಶೋಧನೆ ನಡೆಸಿದ್ದಾರೆ ಮತ್ತು ವಂಶವಾಹಿಗಳು ಹಲವಾರು ರೂಪಗಳಾಗಿ ಬದಲಾಗುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ.

ಚಿಕಿತ್ಸೆಗೆ ಔಷಧ ಕಂಡುಹಿಡಿಯಲು ಮತ್ತು ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆಯನ್ನು ತಯಾರಿಸಲು ಈ ಅಧ್ಯಯನವು ಅವರಿಗೆ ಸಹಾಯ ಮಾಡುತ್ತದೆ.

ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಸಿದ್ಧಪಡಿಸಿದ ಈ ಅಧ್ಯಯನ ವರದಿಯನ್ನು 'ದಿ ಜರ್ನಲ್‌ ಇನ್ಸ್​​​​​​ಫೆಕ್ಷನ್​​’ ಪ್ರಕಟಿಸಿದೆ.

ವೈರಸ್ ಮಾನವ ದೇಹದಲ್ಲಿ ನಿರಂತರವಾಗಿ ಹೇಗೆ ಉಳಿದುಕೊಳ್ಳುತ್ತದೆ ಎಂಬುದರ ಕುರಿತು ಹಾಗೂ ವಂಶವಾಹಿಗಳ ಲಕ್ಷಣಗಳು ಮತ್ತು ಇತರ ಸಂಬಂಧಿತ ಮಾಹಿತಿಯ ಬಗ್ಗೆ ವಿಜ್ಞಾನಿಗಳು ಸತತವಾಗಿ ಅಧ್ಯಯನ ಮಾಡಿದ್ದಾರೆ.

ಮಾನವನ ದೇಹದಲ್ಲಿ ವೈರಸ್ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿಜ್ಞಾನಿಗಳು ಗಮನಾರ್ಹ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ, ದೇಹದಲ್ಲಿ 198 ಬದಲಾವಣೆಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಹೀಗಾಗಿ, ಮಾನವನ ದೇಹದಲ್ಲಿ ಸಾಮಾನ್ಯವಾಗಿ ಸಂಭವಿಸುವ ಜೀವಕೋಶಗಳಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ಜೀನ್‌ಗಳು ಅನೇಕ ರೂಪಗಳಾಗಿ ಬದಲಾಗುತ್ತವೆ ಎಂದು ತಿಳಿಯಬಹುದು. ಸ್ವಾಭಾವಿಕವಾಗಿ, ವೈರಸ್ ಮನುಷ್ಯರ ಮೇಲೆ ಆಕ್ರಮಣ ಮಾಡುವಾಗ ಅನೇಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಸಾಮಾನ್ಯ ವಿದ್ಯಮಾನವಾಗಿದೆ. ಆದರೂ, ಸಾರ್ಸ್ ಕೋವ್- II ವೈರಸ್ ವೇಗವಾಗಿ ಅಥವಾ ನಿಧಾನವಾಗಿ ಬದಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವೈರಸ್‌ನಲ್ಲಿ ಬದಲಾವಣೆಗಳು ಬಹಳ ವೇಗವಾಗಿ ಸಂಭವಿಸಿದಲ್ಲಿ ಔಷಧಗಳು ಅಥವಾ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ನಿಧಾನವಾಗಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ವೈರಸ್‌ನ ಪ್ರದೇಶಗಳನ್ನು ಕಂಡು ಹಿಡಿಯುವ ಮೂಲಕ ದೀರ್ಘಕಾಲದವರೆಗೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಔಷಧಗಳು ಅಥವಾ ಲಸಿಕೆಗಳನ್ನು ಸೂಕ್ತವಾಗಿ ಉತ್ಪಾದಿಸಬಹುದು ಎಂದು ವಿಜ್ಞಾನಿಗಳು ಭಾವಿಸುತ್ತಾರೆ.

ಈ ಹಿನ್ನೆಲೆಯಲ್ಲಿ, ಚಿಕಿತ್ಸೆಯ ಸಮಯದಲ್ಲಿ ವೈರಸ್ ಸುಲಭವಾಗಿ ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸುವ ಲಸಿಕೆಗಳು ಮತ್ತು ಔಷಧಗಳನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ.

ವೈರಸ್‌ಗಳಲ್ಲಿನ ಬದಲಾವಣೆಗಳ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕಾಗಿದೆ ಎಂದು ಲಂಡನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಫ್ರಾನ್ಸಿಸ್ ಬೆಲ್ಲೊಕ್ಸ್ ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.