ಮುಂಬೈ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಷ್ ಪಾಂಡೆ ನಿನ್ನೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ರೋಚಕ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಮರುದಿನವೇ ಅಂದರೆ ಸೋಮವಾರ ಮುಂಬೈನಲ್ಲಿ ವಿವಾಹೋತ್ಸವ ನೆರವೇರಿದೆ.
-
Congratulations Pandey ji. Wish you both a lifetime of beautiful moments and happiness. God bless you both 😇🙏@im_manishpandey
— Virat Kohli (@imVkohli) December 3, 2019 " class="align-text-top noRightClick twitterSection" data="
">Congratulations Pandey ji. Wish you both a lifetime of beautiful moments and happiness. God bless you both 😇🙏@im_manishpandey
— Virat Kohli (@imVkohli) December 3, 2019Congratulations Pandey ji. Wish you both a lifetime of beautiful moments and happiness. God bless you both 😇🙏@im_manishpandey
— Virat Kohli (@imVkohli) December 3, 2019
ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ, ಅಭಿನಂದನೆಗಳು ಪಾಂಡೆ ಜೀ. ಜೀವಮಾನವಿಡೀ ಸುಂದರ ಹಾಗೂ ಸಂತೋಷದ ಕ್ಷಣಗಳು ನಿಮ್ಮದಾಗಲಿ ಎಂದು ಶುಭ ಕೋರಿದ್ದಾರೆ.
ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ, ವೇಗಿ ಉಮೇಶ್ ಯಾದವ್, ಆಲ್ರೌಂಡರ್ ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ನೂತನ ದಂಪತಿಗೆ ವಿಶ್ ಮಾಡಿದ್ದಾರೆ.