ETV Bharat / bharat

ಆರೋಗ್ಯ ಕಾರ್ಯಕರ್ತರ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ ಎಚ್ಚರಿಕೆ - ವೈದ್ಯರು

ಕೋವಿಡ್‌-19 ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‌ ಹಾಗೂ ಇತರ ರಕ್ಷಣಾ ಕಾರ್ಯಕರ್ತರ ಮೇಲಿನ ಹಲ್ಲೆ, ನಿಂದಿಸುವುದು ಸರಿಯಾದ ನಡೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿನ ರಾಜೀವ್‌ ಗಾಂಧಿ ವಿವಿಯ ಆರೋಗ್ಯ ವಿಜ್ಞಾನ ವಿಭಾಗದ 25ನೇ ಸಂಸ್ಥಪನಾ ದಿನದ ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

violence-against-doctors-nurses-and-sanitation-workers-not-acceptable-pm-narendra-modi
ವೈದ್ಯರು, ಆರೋಗ್ಯ ರಕ್ಷಣಾ ಕಾರ್ಯಕರ್ತರ ಮೇಲಿನ ದೌರ್ಜನ್ಯ ಸರಿಯಾದ ನಡೆಯಲ್ಲ; ಪ್ರಧಾನಿ ಮೋದಿ
author img

By

Published : Jun 1, 2020, 2:48 PM IST

ನವದೆಹಲಿ: ಕೋವಿಡ್‌-19 ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‌ ಹಾಗೂ ಇತರ ರಕ್ಷಣಾ ಕಾರ್ಯಕರ್ತರನ್ನು ನಿಂದಿಸುವುದು ಅಥವಾ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯಾದ ನಡೆಯಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿನ ರಾಜೀವ್‌ ಗಾಂಧಿ ವಿವಿಯ ಆರೋಗ್ಯ ವಿಜ್ಞಾನ ವಿಭಾಗದ 25ನೇ ಸಂಸ್ಥಪನಾ ದಿನದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಪ್ರಧಾನಿ, ಆರೋಗ್ಯ ರಕ್ಷಣಾ ಕಾರ್ಯಕರ್ತರಾದ ನೀವು ಎಲ್ಲರ ಬಗ್ಗೆ ದೊಡ್ಡ ಕಾಳಜಿ ವಹಿಸುತ್ತಿದ್ದೀರಿ ಎಂಬುದರ ಬಗ್ಗೆ ನನಗೆ ಅರವಿದೆ ಎಂದು ಹೇಳಿದರು.

ಜನಸಮೂಹದ ಮನಸ್ಥಿತಿಯ ಕೊರತೆಯಿಂದ ವೈದ್ಯರು, ನರ್ಸ್‌ಗಳು, ಪೌರ ಕಾರ್ಮಿಕರ ವಿರುದ್ಧ ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ. ನಿಮ್ಮ ವಿರುದ್ಧ ಕೆಟ್ಟದಾಗಿ ವರ್ತಿಸುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ ರಕ್ಷಣಾ ಸೇವೆಯ ಮುಂಚೂಣಿಯಲ್ಲಿರುವವರಿಗೆ 50 ಲಕ್ಷ ಮೌಲ್ಯ ವಿಮಾನವನ್ನು ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳಿಗೆ ಬ್ರೇಕ್‌ ಹಾಕಲು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದಿದೆ. ಹಲ್ಲೆ ನಡೆಸಿರುವುದು ದೃಢಪಟ್ಟರೆ ಅಪರಾಧಿಗೆ ಜಾಮೀನು ರಹಿತ ವಾರೆಂಟ್‌ ಹಾಗೂ 7 ವರ್ಷದ ವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶ ಈ ಹೊಸ ಕಾನೂನಿನಲ್ಲಿದೆ ಎಂದರು.

ಕೊರೊನಾ ವೈರಸ್‌ ಕಣ್ಣಿಗೆ ಕಾಣಿಸದಂತೆ ಶತ್ರು ಆಗಿದೆ. ಆದರೆ ಭಾರತದ ಕೊರೊನಾ ವಾರಿಯರ್ಸ್‌ ಕಣ್ಣಿಗೆ ಕಾಣಿಸುತ್ತಿದ್ದು, ವೈರಸ್‌ ವಿರುದ್ಧದ ಹೋರಾಟದಲ್ಲಿ ಅವರು ಜಯ ಸಾಧಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎರಡು ವಿಶ್ವ ಯುದ್ಧಗಳ ಬಳಿಕ ಉಂಟಾಗಿರುವ ಮಹಾ ಬಿಕ್ಕಟ್ಟು ಇದಾಗಿದೆ. ವಿಶ್ವಯುದ್ಧಕ್ಕೂ ಮೊದಲು ಮತ್ತು ನಂತರದ ದಿನಗಳು. ಇದೀಗ ಕೋವಿಡ್‌19 ಗೂ ಮುನ್ನ ಹಾಗೂ ನಂತರದ ದಿನಗಳು ವಿಶೇಷವಾಗಿರಲಿವೆ. ಆರೋಗ್ಯ ರಕ್ಷಣಾ ಕಾರ್ಯಕರ್ತರಿಂದ ಆರೈಕೆ ಮತ್ತು ಗುಣಪಡಿಸುವಿಕೆಯನ್ನು ಇಡೀ ವಿಶ್ವ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.