ಗುಂಟೂರು/ಆಂಧ್ರಪ್ರದೇಶ: ತೆರೆದಿದ್ದ ಮದ್ಯದಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿ ಮಂಚಾವರಂ ಮಂಡಲದ ಪಿಲ್ಲುಟ್ಲ ಗ್ರಾಮಸ್ಥರು ಮಂಗಳವಾರ ಮದ್ಯದಂಗಡಿ ಮುಂದೆ ನಿಂತು ಪ್ರತಿಭಟನೆ ನಡೆಸಿದ್ದಾರೆ.
ಮದ್ಯದಂಗಡಿ ತೆರದೆರೆ ಸುತ್ತಮುತ್ತಲಿನ ಗ್ರಾಮದ ಜನರು ಮದ್ಯ ಖರೀದಿಗಾಗಿ ಅಂಗಡಿ ಬಳಿ ಬರುತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಹಾಗಾಗಿ ಮದ್ಯದಂಗಡಿ ತೆರೆಯುವುದು ಬೇಡ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಲಾಕ್ಡೌನ್ನಿಂದ ಇಷ್ಟು ದಿನಗಳ ಕಾಲ ಸ್ಥಗಿತವಾಗಿದ್ದ ಮದ್ಯದಂಗಡಿಗಳನ್ನು ಪುನಃ ತೆರೆಯಲಾಗಿದೆ. ಮದ್ಯದ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿ ಆಂಧ್ರಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಮದ್ಯಪಾನ ಸೇವನೆ ಉತ್ತೇಜನಗೊಳಿಸದಿರುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಸದ್ಯ ಆಂಧ್ರದಲ್ಲಿ ಮದ್ಯದ ಬೆಲೆಯಲ್ಲಿ ಶೇ.50ರಷ್ಟು ಪ್ರತಿ ಶತದಷ್ಟು ಹೆಚ್ಚಳದೊಂದಿಗೆ ಒಟ್ಟಾರೆ ದರ ಶೇ.75ರಷ್ಟು ಏರಿಕೆಯಾಗಿದೆ.